ಬಾರ್ಸಿಲೋನಾಗೆ ಲಿಯೋನೆಲ್​ ಮೆಸ್ಸಿ ಗುಡ್‌ಬೈ?

Messi1
Published on

ಬಾರ್ಸಿಲೋನಾ: ಅರ್ಜೆಂಟೀನಾದ ಫುಟ್‌ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಮುಂದಿನ ವರ್ಷ ಬಾರ್ಸಿಲೋನಾ ಕ್ಲಬ್‌ಗೆ ಗುಡ್‌ಬೈ ಹೇಳಲಿದ್ದಾರೆ ಎಂದು ವರದಿಯಾಗಿದೆ. ಕೆಲದಿನಗಳ ಹಿಂದೆಯಷ್ಟೇ ವೃತ್ತಜೀವನದ 700ನೇ ಗೋಲು ಸಿಡಿಸಿದ್ದ 33 ವರ್ಷದ ಮೆಸ್ಸಿ, 2004ರಿಂದಲೂ ಬಾರ್ಸಿಲೋನಾ ಕ್ಲಬ್ ಪರ ಆಡುತ್ತಿದ್ದಾರೆ. 2017ರಲ್ಲಿ ಕೊನೆಯದಾಗಿ ನವೀಕರಣಗೊಂಡ ಅವರ ಒಪ್ಪಂದ 2021ರಲ್ಲಿ ಮುಕ್ತಾಯಗೊಳ್ಳಲಿದೆ. ಬಳಿಕ ಕ್ಲಬ್ ಜತೆಗೆ ಒಪ್ಪಂದವನ್ನು ಮುಂದುವರಿಸಲು ಮೆಸ್ಸಿ ಒಲವು ಹೊಂದಿಲ್ಲ ಎನ್ನಲಾಗಿದೆ.

ಮೆಸ್ಸಿ ಮತ್ತು ಅವರ ತಂದೆ ಜೋರ್ಗೆ ಈಗಾಗಲೆ ಒಪ್ಪಂದದ ಬಗ್ಗೆ ಕ್ಲಬ್ ಜತೆಗೆ ಮಾತುಕತೆ ನಡೆಸುತ್ತಿದ್ದಾರೆ. ಅವರಿಬ್ಬರೂ ಒಪ್ಪಂದ ಮುಂದುವರಿಸಲು ಆಸಕ್ತಿ ಹೊಂದಿಲ್ಲ ಎಂದು ಸ್ಪೇನ್‌ನ ರೇಡಿಯೋ ಸ್ಟೇಷನ್ ಕೆಡೆನಾ ಸೆರ್ ಶುಕ್ರವಾರ ವರದಿ ಮಾಡಿದೆ.

ತಂಡದ ಈಗಿನ ಗುಣಮಟ್ಟದ ಬಗ್ಗೆ ಮೆಸ್ಸಿ ಅಸಮಾಧಾನ ಹೊಂದಿದ್ದಾರೆ ಎನ್ನಲಾಗಿದೆ. ಅಲ್ಲದೆ ತಂಡದ ಮ್ಯಾನೇಜರ್ ನಿರ್ಗಮನದ ಸಹಿತ ಇತ್ತೀಚೆಗಿನ ಕೆಲ ಬೆಳವಣಿಗೆಗಳಿಗೆ ಕ್ಲಬ್ ತನ್ನನ್ನೇ ಹೊಣೆ ಮಾಡಲಾಗಿರುವ ವಿಷಯ ಮಾಧ್ಯಮಗಳಿಗೆ ಸೋರಿಕೆಯಾಗಿರುವುದಕ್ಕೂ ಬೇಸರಗೊಂಡಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net