ನ್ಯೂಯಾರ್ಕ್‌ ಟೈಮ್ಸ್ ಸ್ಕ್ವೇರ್‌ನಲ್ಲಿ ರಾರಾಜಿಸಿದ ವಿರಾಟ್ ಕೊಹ್ಲಿ ಪ್ರತಿಮೆ; ಇದಕ್ಕೆ ಹೇಳೋದು…

Untitled design - 2024-06-24T171357.891
Published on

ಅಮೆರಿಕ: ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್, 'ರನ್ ಮಷಿನ್', ದಾಖಲೆಗಳ ಸರದಾರ, ವಿರಾಟ್ ಕೊಹ್ಲಿ ಅವರ ಪ್ರತಿಮೆಯನ್ನು ಇದೀಗ ಅಮೆರಿಕಾದ ನ್ಯೂಯಾರ್ಕ್​ ಟೈಮ್ಸ್​ ಸ್ಕ್ವೇರ್​ನಲ್ಲಿ ಅನಾವರಣಗೊಳಿಸಲಾಗಿದೆ. ಪ್ರಸ್ತುತ 2024ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಭಾಗವಾಗಿದ್ದಾರೆ.

ವಿಶ್ವದ ಅತ್ಯಂತ ಜನಪ್ರಿಯ ಕ್ರೀಡಾಪಟುಗಳಲ್ಲಿ ಒಬ್ಬರಾಗಿರುವ ವಿರಾಟ್​, ಕಳೆದ ಒಂದೂವರೆ ದಶಕದಿಂದ ಕ್ರಿಕೆಟ್ ಜಗತ್ತಿನಲ್ಲಿ ತಮ್ಮದೇ ಬ್ರ್ಯಾಂಡ್​ ಸೃಷ್ಟಿಸಿದ್ದಾರೆ. ವಿಶಿಷ್ಟ ಬ್ಯಾಟಿಂಗ್ ವೈಖರಿ ಹಾಗೂ ಕ್ರೀಡಾಸ್ಫೂರ್ತಿ ತೋರುವ ಮಾಜಿ ಕ್ಯಾಪ್ಟನ್ ಕೊಹ್ಲಿ, ಅತೀ ಹೆಚ್ಚು ರನ್​ಗಳನ್ನು ದಾಖಲಿಸುವ ಮೂಲಕ ಕ್ರಿಕೆಟ್ ದಿಗ್ಗಜರು ಮಾಡಿರುವ ರೆಕಾರ್ಡ್​ಗಳನ್ನು ಮುರಿದು, ತಮ್ಮದೇ ಹೊಸ ದಾಖಲೆಯನ್ನು ಬರೆಯುತ್ತಿರುವ ವಿರಾಟ್​ಗೆ ಅಭಿಮಾನಿಗಳು ಪ್ರೀತಿಯಿಂದ ಕಿಂಗ್​ ಕೊಹ್ಲಿ ಎಂದು ಕರೆಯುತ್ತಾರೆ.

ಈ ಬಾರಿಯ ಟಿ20 ವಿಶ್ವಕಪ್‌ ಟೂರ್ನಿಯ ಅತಿಥ್ಯ ವಹಿಸಿರುವ ವೆಸ್ಟ್ ಇಂಡೀಸ್ ಮತ್ತು ಅಮೆರಿಕಾ ಪೈಕಿ ನ್ಯೂಯಾರ್ಕ್​ನ ಟೈಮ್ಸ್​ ಸ್ಕ್ವೇರ್​ನಲ್ಲಿ ಜಾಗತಿಕ ಮಟ್ಟದಲ್ಲಿ ಕ್ರಿಕೆಟ್ ಐಕಾನ್ ಎಂದು ಗುರುತಿಸಿಕೊಂಡಿರುವ ವಿರಾಟ್​ ಅವರ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ. ಪ್ರತಿಮೆಯ ಫೋಟೋ, ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.

ಸದ್ಯ ಈ ವಿಷಯ ವೈರಲ್ ಆಗುತ್ತಿದ್ದಂತೆ ಥ್ರಿಲ್ ಆದ ಕ್ರಿಕೆಟ್ ಅಭಿಮಾನಿಗಳು, 'ಅದಕ್ಕೆ ಹೇಳೋದು, ಒಂದು ಬಾರಿ ಕಿಂಗ್ ಅಂದಮೇಲೆ ಅವರು ಕಿಂಗ್ ಆಗಿಯೇ ಇರುತ್ತಾರೆ'. 'ವಿರಾಟ್​ಗೆ ಸರಿಸಾಟಿ ಯಾರು ಇಲ್ಲ' ಎಂದು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net