More

  ಭಾರತದ ಹೆಡ್​ ಕೋಚ್​ ಆಗುವುದಾದರೆ… ಗೌತಮ್ ಗಂಭೀರ್​ ಮುಂದಿಟ್ಟ 5 ಬೇಡಿಕೆಗಳಿಗೆ ದಂಗಾದ ಬಿಸಿಸಿಐ

  ನವದೆಹಲಿ: ಟೀಂ ಇಂಡಿಯಾದ ಮಾಜಿ ಆಟಗಾರ, 2024ರ ಐಪಿಎಲ್​ನ ಕೊಲ್ಕತ್ತಾ ನೈಟ್​ ರೈಡರ್ಸ್​ ಮೆಂಟರ್ ಆಗಿ ತಂಡವನ್ನು ಚಾಂಪಿಯನ್ಸ್​ ಪಟ್ಟಕ್ಕೆ ಏರಿಸಿದ ಗೌತಮ್ ಗಂಭೀರ್​​, ಇದೀಗ ಕ್ರಿಕೆಟ್ ಲೋಕದಲ್ಲಿ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಸದಾ ಒಂದಲ್ಲ ಒಂದು ವಿಚಾರಗಳಿಂದ ಎಲ್ಲರ ಕೆಂಗಣ್ಣಿಗೆ ಗುರಿಯಾಗುತ್ತಿದ್ದ ಗಂಭೀರ್​, ಈ ಬಾರಿ ಹೊಸ ಸುದ್ದಿಯಿಂದ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು, ಪಾಸಿಟಿವ್ ಚರ್ಚೆಗೆ ಗ್ರಾಸವಾಗಿದ್ದಾರೆ.

  ಇದನ್ನೂ ಓದಿ: ಯುವತಿಗೆ ವಂಚಿಸಿದ ಕಾನ್ಸ್‌ಟೇಬಲ್ ವಿರುದ್ಧ ಎಫ್ಐಆರ್

  ಕಳೆದ ಹಲವು ತಿಂಗಳುಗಳಿಂದ ಭಾರೀ ಚರ್ಚೆಯಲ್ಲಿರುವ ಟೀಂ ಇಂಡಿಯಾದ ಹೆಡ್​ ಕೋಚ್​ ಸ್ಥಾನಕ್ಕೆ ಇದೀಗ ಗೌತಮ್ ಗಂಭೀರ್​ ಅವರೇ ಬಹುತೇಕ ಫಿಕ್ಸ್ ಎಂಬ ಮಾತುಗಳು ವ್ಯಾಪಕವಾಗಿ ಕೇಳಿಬಂದಿವೆ. ಪ್ರಸ್ತುತ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಭಾರತ ತಂಡದ ಹೆಡ್​ ಕೋಚ್ ಆಗಿ ತಂಡವನ್ನು ಮುನ್ನಡೆಸುತ್ತಿರುವ ರಾಹುಲ್ ದ್ರಾವಿಡ್​ ಜಾಗವನ್ನು ಗಂಭೀರ್ ತುಂಬಲು ಮುಂದಾಗಿರುವುದು ಕೆಲವರಿಗೆ ಖುಷಿ ನೀಡಿದರೆ, ಇನ್ನೂ ಕೆಲವರಿಗೆ ಬೇಸರ ತಂದಿದೆ.

  ಪ್ರಸಕ್ತ ವೆಸ್ಟ್​ ಇಂಡೀಸ್​​ ನೆಲದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್​ ಟೂರ್ನಿ ಮುಗಿಯುತ್ತಿದ್ದಂತೆ ಭಾರತ ತಂಡದ ಕೋಚ್ ಆಗಿ ರಾಹುಲ್ ದ್ರಾವಿಡ್​ ಅವರ ಅವಧಿ ಕೂಡ ಮುಕ್ತಾಯಗೊಳ್ಳುತ್ತದೆ. ಇದಾಗುತ್ತಿದ್ದಂತೆ ಟೀಂ ಇಂಡಿಯಾದ ನೂತನ ಹೆಡ್​ ಕೋಚ್ ಆಗಿ ಗೌತಮ್ ಗಂಭೀರ್​ ಅಧಿಕಾರ ಸ್ವೀಕರಿಸುವುದು ಬಹುತೇಕ ಖಚಿತವಾಗಿದೆ. ಈ ಬೆನ್ನಲ್ಲೇ ಗಂಭೀರ್​, ತಮ್ಮ ಅಧಿಕಾರವಧಿಯಲ್ಲಿ ಈ ವಿಷಯಗಳು ಚಾಲ್ತಿಗೆ ಬರಬೇಕು ಎಂದು ಬಿಸಿಸಿಐ ಮುಂದೆ ಖಡಕ್ ಡಿಮ್ಯಾಂಡ್​ ಇಟ್ಟಿದ್ದಾರೆ ಎನ್ನಲಾಗಿದೆ. ಇದನ್ನೆಲ್ಲಾ ಒಪ್ಪಿ, ನೂತನ ಹೆಡ್​ ಕೋಚ್ ಗೌತಮ್ ಎಂದು ಹೇಳಲು ಬಿಸಿಸಿಐಗೆ ಹೆಚ್ಚು ಕಾಲಾವಕಾಶವೇ ಬೇಕಿದೆ ಎಂಬುದು ವರದಿ.

  See also  ಅಬಕಾರಿ ನೀತಿ ಪ್ರಕರಣ: ಕೆ.ಕವಿತಾಗೆ ಮತ್ತೆ ಹಿನ್ನಡೆ, ಮೇ 20 ವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ!

  ಇದನ್ನೂ ಓದಿ: ಅಫ್ಘಾನಿಸ್ತಾನ ವಿರುದ್ಧ ಸೋಲು! ಆಸಿಸ್​ ದಿಗ್ಗಜ ರಿಕ್ಕಿ ಪಾಂಟಿಂಗ್ ಸ್ಥಿತಿ​ ನೋಡಿ ಅಯ್ಯೋ ಪಾಪ ಎಂದ ನೆಟ್ಟಿಗರು

  ಬಿಸಿಸಿಐ ಮುಂದೆ ಗೌತಮ್ ಗಂಭೀರ್ ಇಟ್ಟ​ ಆ ‘ಐದು’ ಡಿಮ್ಯಾಂಡ್​ಗಳು ಹೀಗಿವೆ:

  • ಟೆಸ್ಟ್​ ಪಂದ್ಯಕ್ಕೆ ಪ್ರತ್ಯೇಕ ಟೀಮ್​ನ ರೂಪಿಸಲು ನನಗೆ ಅವಕಾಶ ಕಲ್ಪಿಸಿಕೊಡಬೇಕು.
  • ಭಾರತ ತಂಡದ ಸಂಪೂರ್ಣ ಜವಾಬ್ದಾರಿ ನನ್ನದೇ ಆಗಿರಬೇಕು.
  • ಮ್ಯಾನೇಜ್​ಮೆಂಟ್​ ನೋಡಿಕೊಳ್ಳಲು ತಮ್ಮದೇ ಸಿಬ್ಬಂದಿ ವರ್ಗವನ್ನು ರೂಪಿಸಲು ಒಪ್ಪಿಗೆ ನೀಡಬೇಕು.
  • ಟೀಂ ಇಂಡಿಯಾದಲ್ಲಿನ ಹಿರಿಯ ಆಟಗಾರರಿಗೆ 2025ರ ಚಾಂಪಿಯನ್ಸ್​ ಟ್ರೋಫಿಯೇ ಅಂತಿಮ ಟೂರ್ನಿ ಎಂದು ಪರಿಗಣಿಸಬೇಕು.
  • ಮುಂಬರುವ 2027ರ ಏಕದಿನ ವಿಶ್ವಕಪ್​ಗೆ ಇಂದಿನಿಂದಲೇ ಹೊಸ ಟೀಮ್​ ಮಾಡಲು ಪೂರ್ಣ ಪ್ರಮಾಣದ ಸ್ವಾತಂತ್ರ ಕೊಡಬೇಕು.

  ಸದ್ಯ ಗಂಭೀರ್​ ಮುಂದಿಟ್ಟಿರುವ ಷರತ್ತುಗಳನ್ನು ಒಪ್ಪುವುದೇ ಬಿಸಿಸಿಐಗೆ ದೊಡ್ಡ ತಲೆನೋವಾಗಿದೆ. ಇದನ್ನೆಲ್ಲಾ ಒಪ್ಪಿ, ಯಾವಾಗ ಅಧಿಕೃತವಾಗಿ ಟೀಂ ಇಂಡಿಯಾದ ಹೆಡ್​ ಕೋಚ್ ಸ್ಥಾನವನ್ನು ಘೋಷಣೆ ಮಾಡಲಿದೆ ಎಂಬುದನ್ನು ಸದ್ಯ ಕಾದು ನೋಡಬೇಕಿದೆ,(ಏಜೆನ್ಸೀಸ್).

  ರೇಣುಕಸ್ವಾಮಿ ನನಗೂ ಇಂಥದ್ದೇ ಸಂದೇಶ ಕಳಿಸಿದ್ದ; ಸಾಕ್ಷಿ ಸಮೇತ ವಿವರಿಸಿದ ನಟಿ ಚಿತ್ರಾಲ್ ರಂಗಸ್ವಾಮಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts