ಯುವತಿಗೆ ವಂಚಿಸಿದ ಕಾನ್ಸ್‌ಟೇಬಲ್ ವಿರುದ್ಧ ಎಫ್ಐಆರ್

Fraud po
Published on

ಮುಂಡಗೋಡ: ಯುವತಿಯೊಬ್ಬಳಿಂದ ಹಣ ಪಡೆದು ವಂಚಿಸಿದ ಬಗ್ಗೆ ಇಲ್ಲಿನ ಪೊಲೀಸ್ ಸಿಬ್ಬಂದಿ ವಿರುದ್ಧ ಎಪ್ ಐಆರ್ ದಾಖಲಾಗಿದೆ.
2018 ರಿಂದ 2023 ರವರೆಹೆ ಆನ್ ಲೈನ್ ಹಾಗೂ ನಗದಾಗಿ 18 ಲಕ್ಷ ರೂ. ಹಣ ಪಡೆದು, ಆಕೆಗೆ ವಾಪಸ್ ನೀಡಿಲ್ಲ ಎಂದು ಯುವತಿ ದೂರು ನೀಡಿದ್ದಾಳೆ, ತನಿಖೆ ನಡೆಯುತ್ತಿದೆ ಎಂದು ಎಸ್ ಪಿ ಎನ್‌ ವಿಷ್ಣುವರ್ಧನ ತಿಳಿಸಿದ್ದಾರೆ.

ಆಗಿದ್ದೇನು…?


ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ಮೂಲದ ಗಿರೀಶ ಹಾಸನ ಜಿಲ್ಲೆಯ ಖಾಸಗಿ ಉದ್ಯೋಗಿ ವತಿಯೊಬ್ಬಳ ಜತೆ ಸಾಂಗತ್ಯ ಸಾಧಿಸಿ ಮದುವೆಯಾಗುವುದಾಗಿ ನಂಬಿಸಿ 18 ಲಕ್ಷ ರೂ.ಗಳನ್ನು ವಿವಿಧ ಹಂತಗಳಲ್ಲಿ ಪಡೆದಿದ್ದ. ಹಣವನ್ನು ಅನ್ ಲೈನ್ ಗೇಮಿಂಗ್ ನಲ್ಲಿ ಹೂಡಿ ಕಳೆದುಕೊಂಡಿದ್ದ. ನಂತರ ಯುವತಿಯನ್ನು ಮದುವೆಯಾಗುವುದಿಲ್ಲ ಎಂದು ಕೈ ತಿರಿಸಿದ್ದ.
ಯುವತಿ ತನ್ನ ಹಣ ವಾಪಸ್ ಕೊಡಿಸುವಂತೆ ಕಳೆದ ವರ್ಷವೇ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಳು. ಪೊಲೀಸ್ ಅಧಿಕಾರಿಗಳು ಇಲಾಖೆಯ ಮರ್ಯಾದೆ ಹೋಗುತ್ತದೆ ಎಂಬ ಹೆಸರು ಹೇಳಿ ಎಫ್ ಐಆತ್ ದಾಖಲಿಸದೇ ಸಂಧಾನ ಮಾಡಿಸಿ ಆಕೆಗೆ ಚೆಕ್ ಕೊಡಿಸಿದ್ದರು‌. ಆದರೆ, ವರ್ಷವಾದರೂ ಚೆಕ್ ನಗದಾಗದ ಕಾರಣ ಈಗ ಯುವತಿ ಮತ್ತೆ ಠಾಣೆಯ ಮೆಟ್ಟಿಲೇರಿದ್ದಾಳೆ ಎನ್ನಲಾಗಿದೆ.

ನಾಲ್ಕನೇ ಪ್ರಕರಣ

ಉತ್ತರ ಕನ್ನಡ ಜಿಲ್ಲೆಯಲ್ಲಿ‌ ಪೊಲೀಸರ ಮೇಲೆ ಆರೋಪ ಹೆಚ್ಚುತ್ತಿದೆ. ಕಳೆದ ಒಂದೇ ತಿಂಗಳಲ್ಲಿ‌ ಪೊಲೀಸ್ ಸಿಬ್ಬಂದಿ, ಅಧಿಕಾರಿಗಳ ಮೇಲೆ ನಾಲ್ಕು ಇಂಥ ದೂರುಗಳು ಬಂದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net