ಕೋಲ್ಕತ್ತ: ದೇಶ ಕಂಡ ಅತ್ಯುತ್ತಮ ಕ್ರೀಡಾಪಟುಗಳ ಪೈಕಿ ಸಾನಿಯಾ ಮಿರ್ಜಾ ಮತ್ತು ಮೊಹಮ್ಮದ್ ಶಮಿ ಕೂಡ ಸೇರಿದ್ದಾರೆ. ಶಮಿ 2023ರ ಏಕದಿನ ವಿಶ್ವಕಪ್‌ನಲ್ಲಿ ಫೈನಲ್‌ಗೆ ಟೀಮ್ ಇಂಡಿಯಾವನ್ನು ಮುನ್ನಡೆಸಿದ ಚಾಂಪಿಯನ್ ಬೌಲರ್. ಸಾನಿಯಾ, ಭಾರತದ ಅತ್ಯುತ್ತಮ ಮಹಿಳಾ ಟೆನಿಸ್ ಆಟಗಾರ್ತಿ. ಇಬ್ಬರು ತಮ್ಮ ಜೀವನ ಸಂಗಾತಿಯಿಂದ ದೂರಾಗಿದ್ದಾರೆ. ಹೀಗಾಗಿ ಇವರಿಬ್ಬರು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಆಗಾಗ ಕೇಳಿಬರುತ್ತಿದೆ. ಇತ್ತೀಚೆಗಂತೂ ಈ ಸುದ್ದಿ ಹೆಚ್ಚು ಚರ್ಚೆಯಾಗುತ್ತಿದ್ದು, ಕೊನೆಗೂ ಸಾನಿಯಾ ಮಿರ್ಜಾ ಈ ವಿಚಾರವಾಗಿ ಮೌನ ಮುರಿದಿದ್ದಾರೆ.
ಇತ್ತೀಚೆಗಷ್ಟೇ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನಿ ಕ್ರಿಕೆಟಿಗ ಶೋಯಿಬ್ ಮಲಿಕ್ ವಿಚ್ಛೇದನ ಪಡೆದಿದ್ದರು. ಅವರಂತೆಯೇ, ಶಮಿ ಮತ್ತು ಅವರ ಪತ್ನಿ ಹಸಿನ್ ಜಹಾನ್ ಸಹ ಬೇರ್ಪಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ಸಾನಿಯಾ ಮತ್ತು ಶಮಿ ವಿವಾಹವಾಗುತ್ತಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ. ಇದಿಷ್ಟೇ ಅಲ್ಲದೆ, ಮದುವೆ ಫೋಟೋಗಳು ಕೂಡ ಹರಿದಾಡಿದ್ದವು. ಆದರೆ, ಈ ಚಿತ್ರಗಳು ಸ್ಪಷ್ಟವಾಗಿ ನಕಲಿ ಎಂಬುದು ಬಯಲಾಗಿದೆ. ಇದರ ನಡುವೆ ಇಬ್ಬರೂ ಇನ್ನೂ ಮದುವೆಯಾಗಿಲ್ಲ ಮತ್ತು ಆಗಸ್ಟ್ 20 ರಂದು ಮದುವೆ ಸಮಾರಂಭ ನಿಗದಿಪಡಿಸಲಾಗಿದೆ ಎಂದು ವದಂತಿಗಳು ಸಹ ಹರಿದಾಡುತ್ತಿವೆ. ಆದರೆ, ಈ ಬಗ್ಗೆ ಸಾನಿಯಾ ಆಗಲಿ ಅಥವಾ ಮೊಹಮ್ಮದ್ ಶಮಿ ಆಗಲಿ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
ಇದೆಲ್ಲದರ ನಡುವೆ ಇದೀಗ ಸಾನಿಯಾ ಮಿರ್ಜಾ ಪೋಸ್ಟ್ ಮಾಡಿರುವ ಇನ್ಸ್ಟಾಗ್ರಾಂ ಸ್ಟೋರಿ ವೈರಲ್ ಆಗಿದೆ. ದಿ ಆನ್ಸರ್ ಇಸ್ ಸಬರ್, ಇಟ್ಸ್ ಆಲ್ವೇಸ್ ಸಬರ್ (ಯಾವಾಗಲೂ ಕೊಂಚ ತಾಳ್ಮೆಯಿಂದ ಇರಿ) ಎಂದು ಸಾನಿಯಾ ಬರೆದುಕೊಂಡಿದ್ದಾರೆ. ಆದರೆ, ಸಾನಿಯಾ ಅವರು ಮದುವೆಯ ವದಂತಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೋ ಅಥವಾ ವದಂತಿಗಳನ್ನು ಹರಡುವುದನ್ನು ನಿಲ್ಲಿಸುವಂತೆ ಜನರನ್ನು ಒತ್ತಾಯಿಸುತ್ತಿದ್ದಾರೋ, ಅವರಿಗೆ ಮಾತ್ರ ಖಚಿತವಾಗಿ ತಿಳಿದಿದೆ. ಸದ್ಯ ಮದುವೆ ವಿಚಾರ ಹೆಚ್ಚು ಚರ್ಚೆಯಾಗುತ್ತಿರುವ ಹೊತ್ತಿನಲ್ಲಿ ಸಾನಿಯಾ ಮಾಡಿರುವ ಪೋಸ್ಟ್ ಇದೇ ವಿಚಾರಕ್ಕೆ ಸಂಬಂಧಿಸಿದೆ ಎಂದು ಅಭಿಮಾನಿಗಳು ನಂಬಿದ್ದಾರೆ.
ಸಾನಿಯಾ ಪೋಸ್ಟ್ ನೋಡಿದ ನೆಟ್ಟಿಗರು ಇಬ್ಬರ ನಡುವೆ ಏನೋ ನಡೆಯುತ್ತಿದೆ. ಶಮಿ ಅವರನ್ನು ಸಾನಿಯಾ, ಮದುವೆಯಾದರೂ ಅಚ್ಚರಿಯಿಲ್ಲ ಎಂದು ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ. ಸಾನಿಯಾ ಆಗಲಿ, ಶಮಿಯಾಗಲಿ ಅಧಿಕೃತವಾಗಿ ಪ್ರತಿಕ್ರಿಯಿಸದೇ ಇರುವುದರಿಂದ ಸದ್ಯಕ್ಕೆ ಈ ವದಂತಿಗೆ ಬ್ರೇಕ್ ಬೀಳುವ ಸಾಧ್ಯತೆ ಇಲ್ಲ. ಅಲ್ಲದೆ, ಸಾನಿಯಾ ಮಾಡಿರುವ ಪೋಸ್ಟ್ ಗೊಂದಲಮಯವಾಗಿರುವುದರಿಂದ ಅಭಿಮಾನಿಗಳು ತಮ್ಮ ಮನಸ್ಸಿಗೆ ಬಂದಂತೆ ಭಾವಿಸಿಕೊಳ್ಳುತ್ತಾರೆ. ಹೀಗಾಗಿ ಸಾನಿಯಾ-ಶಮಿ ಮದುವೆ ಸುದ್ದಿ ಸದ್ಯ ಜೀವಂತವಾಗಿ ಇರಲಿದೆ.
ಅಂದಹಾಗೆ ಸಾನಿಯಾ ಅವರು 2010ರಲ್ಲಿ ಶೋಯಿಬ್ ಮಲಿಕ್ ಅವರನ್ನು ವಿವಾಹವಾದರು. ಇದು ಶೋಯಿಬ್ ಅವರ ಎರಡನೇ ವಿವಾಹವಾಗಿತ್ತು. ಮೊದಲ ಪತ್ನಿ ಆಯೇಷಾ ಸಿದ್ದಿಕ್ಗೆ ವಿಚ್ಛೇದನ ನೀಡಿ ಸಾನಿಯಾರನ್ನು ಜೀವನ ಸಂಗಾತಿಯನ್ನಾಗಿ ಮಾಡಿಕೊಂಡಿದ್ದರು. 2018ರಲ್ಲಿ ದಂಪತಿಗೆ ಮಗ ಜನಿಸಿದನು. ಇಬ್ಬರು ದುಬೈನಲ್ಲಿ ವಾಸಿಸುತ್ತಿದ್ದರು. ಶೋಯಿಬ್ ಮಲ್ಲಿಕ್ ಅವರ ಅಕ್ರಮ ಸಂಬಂಧಗಳಿಂದ ಮನನೊಂದಿದ್ದ ಸಾನಿಯಾ, ಶೋಯಿಬ್ರಿಂದ ಅಂತರ ಕಾಯ್ದುಕೊಂಡಿದ್ದರು. ಅಲ್ಲದೆ, ಇಬ್ಬರು ಡಿವೋರ್ಸ್ ಆಗಿದ್ದಾರೆ ಎಂಬ ಸುದ್ದಿ ಕೂಡ ಹರಿದಾಡುತ್ತಿತ್ತು. ಹೀಗಿರುವಾಗ ಶೋಯಿಬ್ ಮಲ್ಲಿಕ್, ಪಾಕ್ ನಟಿ ಸನಾ ಜಾವೇದ್ ಅವರನ್ನು ವಿವಾಹವಾಗಿರುವುದಾಗಿ ದಿಢೀರನೇ ಘೋಷಿಸಿದಾಗ ವದಂತಿಗಳು ನಿಜವಾದವು.
ಇನ್ನು ಶಮಿ ಮತ್ತು ಹಸಿನ್ ಜಹಾನ್ ನಡುವಿನ ಸಮಸ್ಯೆಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಲೇ ಇರುತ್ತದೆ. ಇಬ್ಬರು 2014 ರಲ್ಲಿ ಕೋಲ್ಕತ್ತದಲ್ಲಿ ವಿವಾಹವಾದರು. 2018ರಲ್ಲಿ ಹಸಿನ್ ಜಹಾನ್, ಶಮಿ ವಿರುದ್ಧ ಕೌಟುಂಬಿಕ ದೌರ್ಜನ್ಯದ ದೂರು ದಾಖಲಿಸಿದ್ದರು. (ಏಜೆನ್ಸೀಸ್)
ಆಗಸ್ಟ್ 20ಕ್ಕೆ ಸಾನಿಯಾ ಮಿರ್ಜಾ- ಮೊಹಮ್ಮದ್ ಶಮಿ ಮದುವೆ! ಸಾನಿಯಾ ತಂದೆ ಕೊಟ್ಟ ಸ್ಪಷ್ಟನೆ ಹೀಗಿದೆ…