

ಕೋಲ್ಕತ: ವಯಸ್ಸು ಹಾಫ್ ಸೆಂಚುರಿ ಹತ್ತಿರ ಬಂದರೂ ಆತನ ಉತ್ಸಾಹ ಮಾತ್ರ ಸ್ವಲ್ವವೂ ಕುಗ್ಗಿಲ್ಲ. ಕ್ರೀಡೆ ಎಂಬುದು ಮೂಲತಃ ರಕ್ತದಲ್ಲಿಯೇ ಈತನಿಗೆ ಒಲಿದಿದೆ. ತಂದೆ-ತಾಯಿ ಇಬ್ಬರೂ ರಾಷ್ಟ್ರೀಯ ಮಟ್ಟದಲ್ಲಿ ಆಡಿದ್ದವರು. ವೃತ್ತಿಜೀವನದ ಸಂದ್ಯಾಕಾಲದಲ್ಲಿದ್ದರೂ ಯುವಕರಿಗೂ ಸವಾಲಾಗಿದ್ದಾರೆ ಭಾರತದ ಡಬಲ್ಸ್ ತಜ್ಞ ಲಿಯಾಂಡರ್ ಪೇಸ್. 47ನೇ ವರ್ಷದ ಸಂಭ್ರಮದಲ್ಲಿರುವ ಪೇಸ್, ಭಾರತೀಯ ಟೆನಿಸ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಆಟಗಾರ ಎನಿಸಿದ್ದಾರೆ. 1996ರ ಅಟ್ಲಾಂಟ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಮನೆ ಮನೆ ಮಾತಾದರು. ಈ ದಿಗ್ಗಜ ಆಟಗಾರ ಕುರಿತು ಕೆಲವೊಂದು ಕುತೂಹಲಕಾರಿ ಅಂಶಗಳು ಕೂಡ ಇಲ್ಲಿವೆ...
ಇದನ್ನೂ ಓದಿ:ತ್ರಿಪುರದಲ್ಲಿ ಯುವ ಕ್ರಿಕೆಟ್ ಆಟಗಾರ್ತಿ ನಿಧನ
1. ಪೇಸ್ ಪಾಲಕರು ಇಬ್ಬರೂ ಅಂತಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು. ತಂದೆ ವೇಸ್ ಪೇಸ್ 1972ರ ಮುನಿಚ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ ಭಾರತ ಪುರುಷರ ಹಾಕಿ ತಂಡದ ಸದಸ್ಯರಾಗಿದ್ದರೆ, ತಾಯಿ 1980ರಲ್ಲಿ ಭಾರತ ಮಹಿಳಾ ಬಾಸ್ಕೆಟ್‌ಬಾಲ್ ತಂಡದ ನಾಯಕಿಯಾಗಿದ್ದರು.
2. ಕೇವಲ 12 ವಯಸ್ಸಿಗೆ ಪೇಸ್ ಅಂದಿನ ಮದ್ರಾಸ್‌ನ (ಇಂದು ಚೆನ್ನೈ) ಅಮೃತ್‌ರಾಜ್ ಟೆನಿಸ್ ಅಕಾಡೆಮಿಯಲ್ಲಿ ತರಬೇತಿ ಆರಂಭಿಸಿದರು.
3. 17ನೇ ವಯಸ್ಸಿಗೆ 1990ರಲ್ಲಿ ವಿಂಬಲ್ಡನ್ ಜೂನಿಯರ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದ್ದರು. ಅದೇ ವರ್ಷ ಜೂನಿಯರ್ ಸರ್ಕಿಟ್ ವಿಭಾಗದಲ್ಲಿ ವಿಶ್ವ ನಂ.1 ಸ್ಥಾನ ಅಲಂಕರಿಸಿದ್ದರು.
4. 1996ರಲ್ಲಿ 22ನೇ ವಯಸ್ಸಿನಲ್ಲಿ ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸುವ ಮೂಲಕ 44 ವರ್ಷಗಳ ಬಳಿಕ ಭಾರತಕ್ಕೆ ವೈಯಕ್ತಿಕ ಪದಕ ಗೆದ್ದುಕೊಟ್ಟರು.
5. ಡಬಲ್ಸ್ ವಿಭಾಗದಲ್ಲಿ 18 ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆದ್ದಿರುವ ಏಕೈಕ ಭಾರತೀಯ
6. ಕನ್ನಡಿಗ ಮಹೇಶ್ ಭೂಪತಿ ಹಾಗೂ ಲಿಯಾಂಡರ್ ಪೇಸ್ ಜೋಡಿ ‘ಇಂಡಿಯನ್ ಎಕ್ಸ್‌ಪ್ರೆಸ್’ ಎಂದೇ ಹೆಸರಾಗಿತ್ತು.
7. ಬಾಕ್ಸಿಂಗ್ ಲೆಜೆಂಡ್ ಮೊಹಮದ್ ಅಲಿ ಹಾಗೂ ಸೇಂಟ್ ಮದರ್ ತೆರೆಸಾ ಅವರ ಅನುಯಾಯಿ
8. ಬಾಲಿವುಡ್ ಸಿನಿಮಾ ‘ರಾಜ್ಯಧಾನಿ ಎಕ್ಸ್‌ಪ್ರೆಸ್’ ಚಿತ್ರದಲ್ಲಿ ನಟನೆ
9. ಇದುವರೆಗೂ 97 ಗ್ರಾಂಡ್ ಸ್ಲಾಂ ಟೂರ್ನಿಗಳಲ್ಲಿ ಆಡಿರುವ ಸಾಧನೆ
10. ರಾಜೀವ್‌ಗಾಂಧಿ ಖೇಲ್ ರತ್ನ, ಅರ್ಜುನ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ ಗೌರವ.