More

    ಚಿತ್ರರಂಗದ ಡರ್ಟಿ ಪಾಲಿಟಿಕ್ಸ್​ ಬಿಚ್ಚಿಟ್ಟ ರವೀನಾ …

    ಸುಶಾಂತ್​ ಸಿಂಗ್​ ರಜಪೂತ್​ ಅವರ ಸಾವು, ಬಾಲಿವುಡ್​ನಲ್ಲಿ ಹಲವು ಚರ್ಚೆಗಳನ್ನು ಹುಟ್ಟುಹಾಕಿದೆ. ಪ್ರಮುಖವಾಗಿ ಕಲಾವಿದರುಗಳನ್ನು ಹೇಗೆಲ್ಲಾ ದೂರ ಇಡಲಾಗುತ್ತಿದೆ ಎಂಬುದರ ಕುರಿತು ಚರ್ಚೆಗಳಾಗುತ್ತಿದ್ದು, ಹಲವು ಕಲಾವಿದರು, ತಾವೆಷ್ಟು ಕಷ್ಟಪಡಬೇಕಾಯಿತು ಎಂಬ ತಮ್ಮ ಹಳೆಯ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಈ ಸಾಲಿಗೆ ಇದೀಗ ಮಸ್ತ್​ ಮಸ್ತ್​ ಹುಡುಗಿ ರವೀನಾ ಸಹ ಸೇರಿಕೊಂಡಿದ್ದಾರೆ.

    ಇದನ್ನೂ ಓದಿ: ಸುಶಾಂತ್​ಗೆ ಡಿಪ್ರೆಶನ್​ ಇದ್ದಿದ್ದು ಅವರ ತಂದೆಗೇ ಗೊತ್ತಿರಲಿಲ್ಲವಂತೆ!

    ಸುಶಾಂತ್​ ಸಾವಿನ ನಂತರ ರವೀನಾ ಸಹ ಚಿತ್ರರಂಗದಲ್ಲಿ ಸ್ಟ್ರಗಲ್​ ಮಾಡುವುದು ಎಷ್ಟು ಕಷ್ಟ ಎಂಬ ವಿಷಯವನ್ನು ಬಿಚ್ಚಿಟ್ಟಿದ್ದಾರೆ. ಇಲ್ಲಿ ಹೀರೋಗಳು, ಅವರ ಗರ್ಲ್​ಫ್ರೆಂಡ್​ಗಳು, ಮಾಧ್ಯಮದವರು … ಹೇಗೆಲ್ಲಾ ಒಬ್ಬ ಕಲಾವಿದನನ್ನು ತುಳಿಯುತ್ತಾರೆ ಎಂಬುದನ್ನು ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಕಂಡಿದ್ದಾರೆ.

    ಇಲ್ಲಿ ನಿಜಕ್ಕೂ ಬಣಗಳಿವೆ. ಯಾರಾದರೂ ತಮ್ಮ ತಾಳಕ್ಕೆ ಕುಣಿಯುವುದಿಲ್ಲ ಎಂದರೆ, ಅವರನ್ನು ತಮಾಷೆ ಮಾಡುವುದಷ್ಟೇ ಅಲ್ಲ, ಅವರನ್ನು ನಿರ್ದಯವಾಗಿ ಚಿತ್ರದಿಂದ ಕಿತ್ತು ಬಿಸಾಡಲಾಗುತ್ತದೆ. ಹೀರೋಗಳು, ಅವರ ಗರ್ಲ್​ಫ್ರೆಂಡ್​ಗಳು, ಅವರ ಚಮಚಾಗಳು … ಸೇರಿ ಕೆರಿಯರ್​ ಹಾಳು ಮಾಡುತ್ತಾರೆ. ಕೆಲವರು ತಿರುಗಿ ಬೀಳುತ್ತಾರೆ. ಇನ್ನೂ ಕೆಲವರು ಇದೆಲ್ಲದರ ಗೊಡವೆಯೇ ಬೇಡ ಎಂದು ಸುಮ್ಮನಿದ್ದುಬಿಡುತ್ತಾರೆ ಎಂದು ರವೀನಾ ಬರೆದುಕೊಕಂಡಿದ್ದಾರೆ.

    ಇದನ್ನೂ ಓದಿ: ಸುಶಾಂತ್ ಅಭಿಮಾನಿಗಳ ಕೋಪಾಗ್ನಿಗೆ ಸಲ್ಮಾನ್ ಖಾನ್​, ಕರಣ್​ ಪ್ರತಿಕೃತಿ ದಹನ !

    ಇಲ್ಲಿ ನಿಜ ಯಾರಿಗೂ ಬೇಡ ಎಂದು ಅಭಿಪ್ರಾಯಪಟ್ಟಿರುವ ಅವರು, ನಿಜ ಹೇಳಿದರೆ ಅವರನ್ನು ಹುಚ್ಚ, ಸುಳ್ಳ ಎಂದು ಬ್ರಾಂಡ್​ ಮಾಡಲಾಗುತ್ತದೆ. ಕೆಲವು ಮಾಧ್ಯಮದವರು ಅವರ ಬಗ್ಗೆ ಸುದೀರ್ಘವಾಗಿ ಸುದ್ದಿ ಮಾಡಿ, ಅವರ ಕೆರಿಯರ್​ ಹಾಳು ಮಾಡುತ್ತಾರೆ. ಇದೆಲ್ಲದರಿಂದ ಬಹಳ ಕಷ್ಟಪಟ್ಟು ರೂಪಿಸಿಕೊಂಡಿರುವ ಕೆರಿಯರ್​ ಹಾಳಾಗುತ್ತದೆ. ನಮ್ಮ ತಂದೆ ಸಹ ನಿರ್ದೇಶಕರಾಗಿದ್ದರು. ಆದರೆ, ನಾನು ಸಹ ಸಾಕಷ್ಟು ಸ್ಟ್ರಗಲ್​ ಮಾಡಿದ್ದೇನೆ. ಇವತ್ತು ಈ ಚಿತ್ರರಂಗ ನನಗೆಲ್ಲಾ ಕೊಟ್ಟಿದೆ. ಆದರೂ ಇಲ್ಲಿನ ಡರ್ಟಿ ಪಾಲಿಟಿಕ್ಸ್​ ಸಾಕಷ್ಟು ಬೇಸರ ತರಿಸಿದೆ ಎಂದು ರವೀನಾ ಟ್ವೀಟ್​ ಮಾಡಿದ್ದಾರೆ.

    ಸುಶಾಂತ್​ ಆತ್ಮಹತ್ಯೆ; ಸಲ್ಮಾನ್ ​ಖಾನ್​, ಕರಣ್​ ಜೋಹರ್ ಸೇರಿ 8 ಜನರ ವಿರುದ್ಧ ದಾಖಲಾಯ್ತು ಕೇಸ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts