

ಅಹಮದಾಬಾದ್: ವೇಗಿ ವಾಸುಕಿ ಕೌಶಿಕ್ (7ಕ್ಕೆ 4) ಮತ್ತು ಸ್ಪಿನ್ನರ್ ಕೃಷ್ಣಪ್ಪ ಗೌತಮ್ (49ಕ್ಕೆ 3) ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ದೇಶೀಯ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ 6ನೇ ಗೆಲುವು ದಾಖಲಿಸುವ ಮೂಲಕ ನೇರವಾಗಿ ಕ್ವಾರ್ಟರ್ಫೈನಲ್ ಪ್ರವೇಶಿಸಿದೆ. ಮಯಾಂಕ್ ಅಗರ್ವಾಲ್ ಬಳಗ ತನ್ನ 7ನೇ ಹಾಗೂ ಅಂತಿಮ ಲೀಗ್ ಪಂದ್ಯದಲ್ಲಿ ಮಿಜೋರಾಂ ವಿರುದ್ಧ 6 ವಿಕೆಟ್ಗಳಿಂದ ಸುಲಭ ಗೆಲುವು ದಾಖಲಿಸಿತು.
ಗುಜರಾತ್ ಕಾಲೇಜು ಗ್ರೌಂಡ್ನಲ್ಲಿ ಮಂಗಳವಾರ ನಡೆದ ಕಾದಾಟದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ಗೆ ಇಳಿದ ಮಿಜೋರಾಂ, ರಾಜ್ಯದ ದಾಳಿಗೆ ತತ್ತರಿಸಿ 37.2 ಓವರ್ಗಳಲ್ಲಿ 124 ರನ್ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ನಾಯಕ ಮಯಾಂಕ್ ಅಗರ್ವಾಲ್ (48*) ಮತ್ತು ಮಾಜಿ ನಾಯಕ ಮನೀಷ್ ಪಾಂಡೆ (38*) ಉಪಯುಕ್ತ ಬ್ಯಾಟಿಂಗ್ ಬಲದಿಂದ ಕರ್ನಾಟಕ ತಂಡ 17.1 ಓವರ್ಗಳಲ್ಲೇ 4 ವಿಕೆಟ್ಗೆ 126 ರನ್ ಪೇರಿಸಿ ಗೆಲುವಿನ ದಡ ಸೇರಿತು.
ಮಿಜೋರಾಂ: 37.2 ಓವರ್ಗಳಲ್ಲಿ 124 (ಥಂಕುಮ 37, ಕೆಸಿ ಕಾರ್ಯಪ್ಪ 36, ವಿ. ಕೌಶಿಕ್ 7ಕ್ಕೆ 4, ಭಾಂಡಗೆ 19ಕ್ಕೆ 2, ಕೆ. ಗೌತಮ್ 49ಕ್ಕೆ 3). ಕರ್ನಾಟಕ: 17.1 ಓವರ್ಗಳಲ್ಲಿ 4 ವಿಕೆಟ್ಗೆ 126 (ಬಿಆರ್ ಶರತ್ 2, ಮಯಾಂಕ್ ಅಗರ್ವಾಲ್ 48*, ಅಭಿನವ್ 14, ಮನೋಜ್ ಭಾಂಡಗೆ 21, ಮನೀಷ್ ಪಾಂಡೆ 38*, ಮೋಹಿತ್ ಜಾಂಗ್ರ 37ಕ್ಕೆ 3).
ವಿದರ್ಭ ಎದುರಾಳಿ
ರಾಜ್ಯ ತಂಡ ಲೀಗ್ ಹಂತದಲ್ಲಿ ಆಡಿದ 7 ಪಂದ್ಯಗಳಲ್ಲಿ 6 ಜಯ, 1 ಸೋಲಿನೊಂದಿಗೆ ಸಿ ಗುಂಪಿನ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ತೃಪ್ತಿಪಟ್ಟರೂ, ನಾಕೌಟ್ ಹಂತಕ್ಕೇರಿದ 10 ತಂಡಗಳ ಪೈಕಿ ಅಗ್ರ 6ರೊಳಗೆ ಸ್ಥಾನ ಸಂಪಾದಿಸುವಲ್ಲಿ ಯಶಸ್ವಿಯಾದ ಕಾರಣ ನೇರವಾಗಿ ಕ್ವಾರ್ಟರ್ೈನಲ್ ಪ್ರವೇಶ ಕಂಡಿತು. ರಾಜ್ಯ ತಂಡ ಡಿಸೆಂಬರ್ 11ರಂದು ರಾಜ್ಕೋಟ್ನಲ್ಲಿ ನಡೆಯಲಿರುವ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಬಿ ಗುಂಪಿನ ಅಗ್ರಸ್ಥಾನಿ ವಿದರ್ಭ ತಂಡವನ್ನು ಎದುರಿಸಲಿದೆ.
ನಾಕೌಟ್ ಪಂದ್ಯಗಳ ವೇಳಾಪಟ್ಟಿ
ಡಿ.9: ಪ್ರಿ ಕ್ವಾರ್ಟರ್ಫೈನಲ್ಸ್
ಬಂಗಾಳ-ಗುಜರಾತ್
ಕೇರಳ-ಮಹಾರಾಷ್ಟ್ರ
ಡಿಸೆಂಬರ್ 11: ಕ್ವಾರ್ಟರ್ಫೈನಲ್
ಹರಿಯಾಣ-ಮೊದಲ ಪ್ರಿ ಕ್ವಾ. ವಿಜೇತ
ರಾಜಸ್ಥಾನ-2ನೇ ಪ್ರಿ. ಕ್ವಾ. ವಿಜೇತ
ವಿದರ್ಭ-ಕರ್ನಾಟಕ
ಮುಂಬೈ-ತಮಿಳುನಾಡು
ಡಿಸೆಂಬರ್ 13-14: ಸೆಮಿಫೈನಲ್ಸ್
ಡಿಸೆಂಬರ್ 16: ಫೈನಲ್
ಎಲ್ಲಿ: ರಾಜ್ಕೋಟ್
ಆರಂಭ: ಬೆಳಗ್ಗೆ 9.00