ರ‍್ಯಾಪಿಡ್‌ Chess ಚಾಂಪಿಯನ್​ಶಿಪ್​; ಗುಕೇಶ್​ ಬೆನ್ನಲ್ಲೇ ಭಾರತದ ಮತ್ತೋರ್ವ ಸ್ಫರ್ಧಿಗೆ ವಿಶ್ವ ಕಿರೀಟ

Koneru Hampi
Published on

ನವದೆಹಲಿ: ನ್ಯೂಯಾರ್ಕ್​ನಲ್ಲಿ ನಡೆಯುತ್ತಿರುವ ಮಹಿಳಾ ವಿಶ್ವ ರ‍್ಯಾಪಿಡ್‌ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ (Rapid Chess Championship) ಭಾರತದ ಕೊನೆರು ಹಂಪಿ ಚಾಂಪಿಯನ್​ ಪಟ್ಟವನ್ನು ಅಲಂಕರಿಸಿದ್ದಾರೆ. ಇಂಡೋನೇಷ್ಯಾದ ಐರಿನ್ ಸುಕಂದರ್ ಅವರನ್ನು ಮಣಿಸುವ ಮೂಲಕ ಕೊನೆರು ಹಂಪಿ ಎರಡನೇ ಬಾರಿಗೆ ವಿಶ್ವ ಚಾಂಪಿಯನ್​ ಪಟ್ಟ ಅಲಂಕರಿಸಿದ್ದಾರೆ. 

ಕೊನೆರು ಹಂಪಿ ಅವರು 2019ರಲ್ಲಿ ಕೊನೆಯದಾಗಿ ಪ್ರಶಸ್ತಿ ಗೆದ್ದಿದ್ದರು. ಚೀನಾದ ಜು ವೆಂಜುನ್ ಬಳಿಕ ಒಂದಕ್ಕಿಂತ ಹೆಚ್ಚು ಸಲ ಪ್ರಶಸ್ತಿ ಗೆದ್ದ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಕೊನೆರು ಅವರು ಪಾತ್ರರಾಗಿದ್ದಾರೆ. 37  ವರ್ಷದ ಕೊನೆರು ಅವರು ಇಂಡೋನೇಷ್ಯಾದ ಐರಿನ್ ಸುಕಂದರ್ ಎದುರು 8.5 ಅಂಕ ಕಲೆಹಾಕುವ ಮೂಲಕ ಚಾಂಪಿಯನ್​ ಪಟ್ಟ ಅಲಂಕರಿಸಿದರು.

ವಿಶ್ವ ರ‍್ಯಾಪಿಡ್‌ ಚೆಸ್ ಚಾಂಪಿಯನ್‌ಷಿಪ್‌ (Rapid Chess Championship) ಪುರುಷರ ವಿಭಾಗದಲ್ಲಿ 18 ವರ್ಷದ ರಷ್ಯಾದ ವೊಲೊಡರ್ ಮುರ್ಜಿನ್ ಪ್ರಶಸ್ತಿ ಜಯಿಸಿದ್ದಾರೆ. ಆ ಮೂಲಕ ಈ ಪ್ರಶಸ್ತಿ ಗೆದ್ದ ಎರಡನೇ ಕಿರಿಯ ಆಟಗಾರ ಎನಿಸಿದ್ದಾರೆ. ಇತ್ತೀಚೆಗಷ್ಟೇ ಭಾರತದ ಡಿ. ಗುಕೇಶ್ ವಿಶ್ವ ಚೆಸ್​ ಚಾಂಪಿಯನ್‌ಷಿಪ್ (World Chess Championship) ಗೆದ್ದಿದ್ದರು.

https://www.vijayavani.net/biggboss-promo-released-sudeep-speech-and-elimination-goes-viral

https://www.vijayavani.net/teachers-students-dance-at-government-girls-hostel-event-during-national-mourning

https://www.vijayavani.net/jasprit-bumrah-beats-all-time-greats-scripts-unreal-record-with-200th-test-scalp

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net