ದಿಢೀರ್​ ತವರಿಗೆ ಮರಳಿದ ವಿರಾಟ್​ ಕೊಹ್ಲಿ ಮೊದಲ ಟೆಸ್ಟ್​ಗೆ ಮುನ್ನ ತಂಡ ಸೇರಿಕೊಳ್ಳುವ ನಿರೀಕ್ಷೆ

kohli web
Published on

ಸೆಂಚುರಿಯನ್​: ಟೀಮ್​ ಇಂಡಿಯಾದ ಸ್ಟಾರ್​ ಬ್ಯಾಟರ್​ ಕುಟುಂಬದ ತುರ್ತು ಕಾರಣಗಳಿಂದಾಗಿ ದಕ್ಷಿಣ ಆಫ್ರಿಕಾ ಪ್ರವಾಸದಿಂದ ತವರಿಗೆ ಮರಳಿದ್ದಾರೆ. ಆದರೆ ಮಂಗಳವಾರ ಆರಂಭವಾಗಲಿರುವ ಹರಿಣಗಳ ವಿರುದ್ಧದ ಮೊದಲ ಟೆಸ್ಟ್​ ಪಂದ್ಯಕ್ಕೆ ಮುನ್ನ ಅವರು ತಂಡವನ್ನು ಮರಳಿ ಕೂಡಿಕೊಳ್ಳುವ ನಿರೀಕ್ಷೆ ಇದೆ.

ವಿರಾಟ್​ ಕೊಹ್ಲಿ ಬಿಸಿಸಿಐ ಅನುಮತಿ ಪಡೆದು ಭಾರತ ತಂಡವನ್ನು ತೊರೆದಿದ್ದಾರೆ ಎನ್ನಲಾಗಿದೆ. ಕೊಹ್ಲಿ ಕಳೆದ ಗುರುವಾರ ತಂಡದಿಂದ ಹೊರಗುಳಿದಿದ್ದಾರೆ. ಇದು ಪೂರ್ವ ನಿರ್ಧರಿತವಾಗಿತ್ತು. ಇದರಿಂದಾಗಿ ಕೊಹ್ಲಿ ಭಾರತ ತಂಡದೊಳಗೆ ನಡೆದ 3 ದಿನಗಳ ಅಭ್ಯಾಸ ಪಂದ್ಯವನ್ನೂ ಆಡಲಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಕೊಹ್ಲಿ ತವರಿಗೆ ಮರಳಲು ಕಾರಣವಾದ ಕುಟುಂಬದ ತುರ್ತು ಏನೆಂದು ಬಿಸಿಸಿಐ ಸ್ಪಷ್ಟ ವಿವರಣೆ ನೀಡಿಲ್ಲ. ಕಳೆದ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಕೊಹ್ಲಿ ಬೆನ್ನು ನೋವಿನಿಂದಾಗಿ ಒಂದು ಟೆಸ್ಟ್​ ಪಂದ್ಯವನ್ನು ತಪ್ಪಿಸಿಕೊಂಡಿದ್ದರು. ಇದರಿಂದಾಗಿ ಅವರು ದಣ ಆಫ್ರಿಕಾದಲ್ಲೇ 100ನೇ ಟೆಸ್ಟ್​ ಆಡುವ ಅವಕಾಶದಿಂದಲೂ ವಂಚಿತರಾಗಿದ್ದರು. ವಿರಾಟ್​ ಕೊಹ್ಲಿ ಭಾನುವಾರ ದಕ್ಷಿಣ ಆಫ್ರಿಕಾಕ್ಕೆ ಮರಳಲಿದ್ದು, ತಂಡದ ಅಭ್ಯಾಸದಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net