ಐಸಿಸಿ ನೂತನ ಟಿ-20 ರ‍್ಯಾಂಕಿಂಗ್ ಪಟ್ಟಿ ಬಿಡುಗಡೆ; ಟಾಪ್ 10 ಸ್ಥಾನಕ್ಕೆ ಜಿಗಿದ ವಿರಾಟ್ ಕೊಹ್ಲಿ

Virat Kohli (1)
Published on

ನವದೆಹಲಿ: ವಿರಾಟ್ ಕೊಹ್ಲಿ ಟಿ-20 ವಿಶ್ವಕಪ್​ನ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಜೇತ 82 ರನ್ ಗಳಿಸಿ, ಭಾರತ ತಂಡವನ್ನು ಜಯದ ಹೊಸ್ತಿಲು ದಾಟಿಸಿದ್ದರು. ಈ ಪಂದ್ಯದ ಅದ್ಭುತ ಪ್ರದರ್ಶನದಿಂದ ಇದೀಗ ಕೊಹ್ಲಿ ಟಿ-20 ಕ್ರಿಕೆಟ್​ನ ಟಾಪ್ 10 ಬ್ಯಾಟಿಂಗ್ ಶ್ರೇಯಾಂಕ ಗಳಿಸಿಕೊಂಡಿದ್ದಾರೆ.

ಮೆಲ್ಬೋರ್ನ್​ನಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ ಜವಾಬ್ದಾರಿಯುತ ಇನ್ನಿಂಗ್ಸ್ ಕಟ್ಟಿ, 53 ಎಸೆತಳಲ್ಲಿ 6 ಬೌಂಡರಿ ಮತ್ತು 4 ಸಿಕ್ಸ್​ ಸಿಡಿಸಿ ಮಿಂಚಿದ್ದರು. ಇದೀಗ ಐಸಿಸಿ ಬಿಡುಗಡೆ ಮಾಡಿರುವ ನೂತನ ರ‍್ಯಾಂಕಿಂಗ್ ಪಟ್ಟಿಯಲ್ಲಿ ಕೊಹ್ಲಿ 9ನೇ ಸ್ಥಾನ ಪಡೆದುಕೊಂಡಿದ್ದಾರೆ.

ಪಾಕಿಸ್ತಾನ ತಂಡದ ಆರಂಭಿಕ ಆಟಗಾರ ಮೊಹಮ್ಮದ್ ರಿಝ್ವಾನ್ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಟಿ-20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಜೇಯ 92 ರನ್ ಗಳಿಸಿದ ನಂತರ ನ್ಯೂಜಿಲೆಂಡ್‌ನ ಆರಂಭಿಕ ಆಟಗಾರ ಡೆವೊನ್ ಕಾನ್ವೆ ಎರಡನೇ ಸ್ಥಾನದಲ್ಲಿದ್ದಾರೆ.

ಐಸಿಸಿಯ ನೂತನ ರ‍್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರ ಹತ್ತರೊಳಗೆ ಇಬ್ಬರು ಬ್ಯಾಟ್ಸ್​​ಮನ್​ಗಳು ಸ್ಥಾನ ಪಡೆದಿದ್ದಾರೆ. ವಿರಾಟ್ ಕೊಹ್ಲಿ 635 ಪಾಯಿಂಟ್​​ನೊಂದಿಗೆ 9ನೇ ಸ್ಥಾನ ಪಡೆದುಕೊಂಡರೆ, ಸೂರ್ಯ ಕುಮಾರ್ ಯಾದವ್ 828 ಅಂಕಗಳೊಂದಿಗೆ 3ನೇ ಸ್ಥಾನಕ್ಕೆ ಸಂಪಾದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net