ವಿಶ್ವಕಪ್​ನಲ್ಲಿ ಅಜೇಯ ಓಟ ಮುಂದುವರೆಸಿದ ಭಾರತ; ನ್ಯೂಜಿಲೆಂಡ್ ವಿರುದ್ಧ 4 ವಿಕೆಟ್​ಗಳ ಜಯ

Virat Kohli
Published on

ಧರ್ಮಶಾಲಾ: ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್​ ಅಸೋಸಿಯೇಷನ್​ ಮೈದಾನದಲ್ಲಿ ನ್ಯೂಜಿಲೆಂಡ್​ ವಿರುದ್ಧ ನಡೆದ ಪಂದ್ಯದಲ್ಲಿ 4 ವಿಕೆಟ್​ಗಳ ಜಯಗಳಿಸುವ ಮೂಲಕ ಭಾರತ ಏಕದಿನ ವಿಶ್ವಕಪ್​ನಲ್ಲಿ ತನ್ನ ಅಜೇಯ ಓಟವನ್ನು ಮುಂದುವರೆಸಿದ್ದು, ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.

ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್​ ತಂಡವು ಡೆರಿಲ್ ಮಿಚೆಲ್ (130 ರನ್, 127 ಎಸೆತ, 9 ಬೌಂಡರಿ, 5 ಸಿಕ್ಸರ್), ರಚಿನ್ ರವೀಂದ್ರ (75 ರನ್, 87 ಎಸೆತ, 6 ಬೌಂಡರಿ, 1 ಸಿಕ್ಸರ್) 159 ರನ್​ಗಳ ಜತೆಯಾಟದ ಫಲವಾಗಿ 50 ಓವರ್​ಗಳಲ್ಲಿ 273 ರನ್​ಗಳಿಗೆ ಆಲೌಟ್​ ಆಯಿತು.

274 ರನ್​ಗಳ ಗುರಿ ಬೆನ್ನತ್ತಿದ್ದ ಭಾರತ ತಂಡವು ವಿರಾಟ್​ ಕೊಹ್ಲಿ (95 ರನ್, 104 ಎಸೆತ, 8 ಬೌಂಡರಿ, 2 ಸಿಕ್ಸರ್​) ಶತಕವಂಚಿತ ಆಟದ ಫಲವಾಗಿ ಭಾರತ ತಂಡವು 48 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ ರನ್​ ಗಳಿಸಿ ಗೆಲುವಿನ ನಗೆ ಬೀರಿತ್ತು. ಈ ಮೂಲಕ ವಿಶ್ವಕಪ್​ನಲ್ಲಿ ಭಾರತ ತಂಡವು ತನ್ನ ಅಜೇಯ ಓಟವನ್ನು ಮುಂದುವರೆಸಿದೆ.

ನ್ಯೂಜಿಲೆಂಡ್ ಪರ ಲಾಕಿ ಫರ್ಗ್ಯೂಸನ್ (8-0-63-2), ಟ್ರೆಂಟ್ ಬೌಲ್ಟ್ (10-0-60-1), ಮಿಚೆಲ್​ ಸ್ಯಾಂಟ್ನರ್ (10-0-37-1), ಮ್ಯಾಟ್​​ ಹೆನ್ರಿ (9-0-55-1), ರಚಿನ್ ರವೀಂದ್ರ (9-0-46-0), ಗ್ಲೆನ್​ ಫಿಲಿಪ್ಸ್​ (2-0-12-0) ರನ್​ ನೀಡಿ ವಿಕೆಟ್​ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net