More

    ರಾಜಸ್ಥಾನ ಚುನಾವಣೆ; 43 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್

    ಜೈಪುರ: ಮುಂಬರುವ ರಾಜಸ್ಥಾನ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್​ 43 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದೆ.

    ಬಿಡುಗಡೆಯಾಗಿರುವ ಎರಡನೇ ಪಟ್ಟಿಯಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್​ ಹಾಗೂ ಸಚಿನ್ ಪೈಲಟ್​ ಅವರ ಆಪ್ತರಿಗೂ ಕಾಂಗ್ರೆಸ್​ ಹೈಕಮಾಂಡ್​ ಮಣೆ ಹಾಕಿದೆ. ಶನಿವಾರ ಬಿಡುಗಡೆಯಾಗಿದ್ದ 33 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ 28 ಮಂದಿ ಹಾಲಿ ಶಾಸಕರಿಗೆ ಟಿಕೆಟ್​ ಘೋಷಿಸಲಾಗಿತ್ತು.

    ಇದನ್ನೂ ಓದಿ: ನೇಪಾಳದಲ್ಲಿ 4.3 ತೀವ್ರತೆಯ ಭೂಕಂಪ; 24 ಘಂಟೆಗಳ ಒಳಗೆ ಎರಡು ಭಾರಿ ಕಂಪಸಿದ ಭೂಮಿ

    ಕೇಕ್ರಿ ಕ್ಷೇತ್ರದಿಂದ ರಘು ಶರ್ಮಾ, ಸಿವಿಲ್ ಲೈನ್ಸ್‌ನಿಂದ ಪ್ರತಾಪ್ ಖಚರಿಯಾವಾಸ್ ಮತ್ತು ದೀಗ್-ಕುಮ್ಹೆರ್‌ನಿಂದ ವಿಶ್ವೇಂದ್ರ ಸಿಂಗ್​, ಖಜುವಾಲಾ ಕ್ಷೇತ್ರದಿಂದ ಗೋವಿಂದ್ ರಾಮ್ ಮೇಘವಾಲ್, ಸದಾಶಹರ್‌ನಿಂದ ಅನಿಲ್ ಶರ್ಮಾ, ರಾಮಗಢದಿಂದ ಜುಬೇರ್ ಖಾನ್, ದೌಸಾದಿಂದ ಮುರಾರಿ ಲಾಲ್ ಮೀನಾ, ಮಂಡಲ್‌ನಿಂದ ರಾಮ್‌ಲಾಲ್ ಜಾತ್ ಮತ್ತು ಪ್ರಮೋದ್ ಜೈನ್ ಭಯಾಗೆ ಟಿಕೆಟ್​ ನೀಡಲಾಗಿದೆ.

    ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ಪಂಚರಾಜ್ಯ ಚುನಾವಣೆ ಮುಂಬರುವ ಲೋಕಸಭೆ ಎಲೆಕ್ಷನ್​ಗೆ ಸೆಮಿಫಿನಾಲೆ ಎಂದೇ ಹೇಳಲಾಗಿದೆ. 200 ಸದಸ್ಯಬಲದ ರಾಜಸ್ಥಾನ ವಿಧಾನಸಭೆಗೆ ನವೆಂಬರ್ 25ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 3ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts