

ಟರೌಬ (ಟ್ರಿನಿಡಾಡ್): ನಾಯಕ ಕೈರಾನ್ ಪೊಲ್ಲಾರ್ಡ್ ಸಹಿತ ತಂಡದ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿ ಡ್ವೇಯ್ನ ಬ್ರಾವೊ ಹಂಗಾಮಿ ಸಾರಥ್ಯದಲ್ಲಿ ಕಣಕ್ಕಿಳಿದ ನಡುವೆಯೂ ಟ್ರಿನ್‌ಬಾಗೋ ನೈಟ್‌ರೈಡರ್ಸ್ ತಂಡ ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಟಿ20 ಟೂರ್ನಿಯಲ್ಲಿ ಅಜೇಯ ಗೆಲುವಿನ ಓಟವನ್ನು ಸತತ 8ನೇ ಪಂದ್ಯಕ್ಕೆ ವಿಸ್ತರಿಸಿದೆ. ಆರಂಭಿಕ ಲೆಂಡ್ಲ್ ಸಿಮ್ಮನ್ಸ್ (96 ರನ್, 63 ಎಸೆತ, 7 ಬೌಂಡರಿ, 6 ಸಿಕ್ಸರ್) ಭರ್ಜರಿ ಬ್ಯಾಟಿಂಗ್ ನೆರವಿನಿಂದ ನೈಟ್‌ರೈಡರ್ಸ್ ತಂಡ ಬುಧವಾರ ನಡೆದ ಪಂದ್ಯದಲ್ಲಿ ಸೇಂಟ್ ಕಿಟ್ಸ್ ಆಂಡ್ ನೆವಿಸ್ ಪೇಟ್ರಿಯಾಟ್ಸ್ ತಂಡವನ್ನು 59 ರನ್‌ಗಳಿಂದ ಸುಲಭವಾಗಿ ಸೋಲಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ನೈಟ್‌ರೈಡರ್ಸ್ ತಂಡ 4 ವಿಕೆಟ್‌ಗೆ 174 ರನ್ ಪೇರಿಸಿತು. ಪ್ರತಿಯಾಗಿ ಪೇಟ್ರಿಯಾಟ್ಸ್ ತಂಡ 7 ವಿಕೆಟ್‌ಗೆ 115 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತದ ಸ್ಪಿನ್ನರ್ ಪ್ರವೀಣ್ ತಂಬೆ 4 ಓವರ್‌ಗಳ ದಾಳಿಯಲ್ಲಿ 1 ಮೇಡನ್ ಸಹಿತ ಕೇವಲ 12 ರನ್ ಬಿಟ್ಟುಕೊಟ್ಟು 1 ವಿಕೆಟ್ ಕಬಳಿಸುವ ಮೂಲಕ ಗಮನಸೆಳೆದರು.
ಟ್ರಿನ್‌ಬಾಗೋ ನೈಟ್‌ರೈಡರ್ಸ್: 4 ವಿಕೆಟ್‌ಗೆ 174 (ಲೆಂಡ್ಲ್ ಸಿಮ್ಮನ್ಸ್ 96, ಮನ್ರೊ 9, ಡರೇನ್ ಬ್ರಾವ 36, ಡ್ರಾಕ್ಸ್ 35ಕ್ಕೆ 2, ಕಾಟ್ರೆಲ್ 32ಕ್ಕೆ 1), ಸೇಂಟ್ ಕಿಟ್ಸ್ ಆಂಡ್ ನೆವಿಸ್ ಪೇಟ್ರಿಯಾಟ್ಸ್: 7 ವಿಕೆಟ್‌ಗೆ 115 (ಲೆವಿಸ್ 5, ಕ್ರಿಸ್ ಲ್ಯಾನ್ 34, ಡ ಸಿಲ್ವ 29, ಡಂಕ್ 9, ರಾಮ್‌ದಿನ್ 4, ಸಿಕಂದರ್ ರಾಜಾ 15ಕ್ಕೆ 3, ಪ್ರವೀಣ್ ತಂಬೆ 12ಕ್ಕೆ 1, ಡ್ವೇಯ್ನ ಬ್ರಾವೊ 17ಕ್ಕೆ 1). ಪಂದ್ಯಶ್ರೇಷ್ಠ: ಲೆಂಡ್ಲ್ ಸಿಮ್ಮನ್ಸ್.