

ನವದೆಹಲಿ: ಪ್ರತಿಯೊಬ್ಬರ ಜೀವನದಲ್ಲಿ ನೋವು, ಅವಮಾನ, ಕಷ್ಟಗಳು ಕಲಿಸುವ ಪಾಠವನ್ನು ಬೇರೆ ಯಾರೂ ಕಲಿಸುವುದಿಲ್ಲ. ಎಲ್ಲರ ವೈಯಕ್ತಿಕ ಜೀವನದಲೂ ಇದು ಸರ್ವೆ ಸಾಮಾನ್ಯ. ಇದಕ್ಕೆ ಕ್ರಿಕೆಟಿಗ ರಾಹುಲ್ ಕೂಡ ಹೊರತಾಗಿಲ್ಲ. ಸ್ವತಃ ಅವೇ ಹೇಳಿಕೊಂಡರಂತೆ 2019ರಲ್ಲಿ ಅನುಭವಿಸಿದ ಅಮಾನತು ಶಿಕ್ಷೆಯಿಂದ ಸಾಕಷ್ಟು ಬದಲಾದೆ. ಬಳಿಕ ಸ್ಥಿರ ನಿರ್ವಹಣೆ ನೀಡುತ್ತಿದ್ದೇನೆ ಎಂದು ಕೆಎಲ್ ರಾಹುಲ್ ಹೇಳಿಕೊಂಡಿದ್ದಾರೆ. ಭಾರತದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಜತೆಗೂಡಿ ಕಾಫಿ ವಿಥ್ ಕರಣ್ ಕಾರ್ಯಕ್ರಮದಲ್ಲಿ ಮಹಿಳೆಯರ ಬಗ್ಗೆ ಅಸಭ್ಯವಾಗಿ ಮಾತನಾಡಿದ್ದರು. ಇದಕ್ಕಾಗಿ ಬಿಸಿಸಿಐ ರಾಹುಲ್-ಪಾಂಡ್ಯಗೆ ನಿಷೇಧದ ಶಿಕ್ಷೆ ವಿಧಿಸಿತ್ತು.
‘ಈ ಘಟನೆ ಬಳಿಕ ನಾನು ಸಾಕಷ್ಟು ಬದಲಾದೆ. ಇಂಥ ಕಠಿಣ ವೇಳೆಯಲ್ಲಿ ಸ್ಥಿರ ನಿರ್ವಹಣೆ ಕಾಯ್ದುಕೊಳ್ಳುವುದೇ ಸವಾಲಾಗಿತ್ತು. ಈ ವೇಳೆ ಬಗೆ ಬಗೆಯ ರೀತಿಯಲ್ಲಿ ಯೋಚಿಸಿದೆ. ನನ್ನಿಂದ ತಂಡ ಏನು ಅಪೇಕ್ಷಿಸುತ್ತದೆ. ಅದನ್ನು ಪೂರೈಸುವುದಷ್ಟೇ ನನ್ನ ಕೆಲಸ ಎಂದು ಯೋಚಿಸಿದೆ ಎಂದು ರಾಹುಲ್ ಹೇಳಿದ್ದಾರೆ. ನನ್ನನ್ನು ನಾನು ಅರ್ಥೈಸಿಕೊಳ್ಳಲು ಅವಕಾಶ ನೀಡಿತು. ನಮ್ಮ ವೃತ್ತಿ ಜೀವನ ದೀರ್ಘವಾಗಿಲ್ಲ. 11 ರಿಂದ 12 ವರ್ಷವಷ್ಟೇ ನಮಗೆ ಕ್ರೀಡೆಯಲ್ಲಿ ಅಯಸ್ಸು, ಈ ವೇಳೆಯಲ್ಲಿ ನನ್ನಿಂದ ಸಾಧ್ಯವಾದಷ್ಟು ಉತ್ತಮ ನಿರ್ವಹಣೆಯನ್ನು ಕ್ರಿಕೆಟ್ಗೆ ನೀಡಬೇಕೆಂದು ನಿರ್ಧರಿಸಿದೆ ಎಂದು 28 ವರ್ಷದ ರಾಹುಲ್ ಹೇಳಿದ್ದಾರೆ. ತಂಡದ ಹಿರಿಯ ಆಟಗಾರನಾಗಿ ರೋಹಿತ್ ಶರ್ಮ ನನ್ನ ಮೇಲೆ ಸಾಕಷ್ಟು ನಂಬಿಕೆ ಇಟ್ಟಿದ್ದಾರೆ. ಅವರು ನೀಡುವ ಪೋತ್ಸಾಹ ನಾನು ಋಣಿಯಾಗಿದ್ದೇನೆ ಎಂದು ರಾಹುಲ್ ಹೇಳಿದ್ದಾರೆ.