ಏಷ್ಯಾಕಪ್​ಗೆ ಭಾರತ ತಂಡದ ಆಯ್ಕೆಗೂ ಮುನ್ನ ಸಿಹಿ ಸುದ್ದಿ ರವಾನಿಸಿದ ಕೆಎಲ್​ ರಾಹುಲ್​

rahul web
Published on

ಬೆಂಗಳೂರು: ಟೀಮ್​ ಇಂಡಿಯಾ ಬ್ಯಾಟರ್​ ಹಾಗೂ ಕನ್ನಡಿಗ ಕೆಎಲ್​ ರಾಹುಲ್​ ಮುಂಬರುವ ಏಷ್ಯಾಕಪ್​-ವಿಶ್ವಕಪ್​ ಪೂರ್ವಭಾವಿಯಾಗಿ ಸಂಪೂರ್ಣ ಫಿಟ್ನೆಸ್​ ಕಂಡುಕೊಂಡಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ರವಾನಿಸಿದ್ದಾರೆ. ಎನ್​ಸಿಎಯಲ್ಲಿ ಶುಕ್ರವಾರ ನಡೆದ ಫಿಟ್ನೆಸ್​ ಪರೀಕ್ಷೆಯಲ್ಲಿ ಅವರು ಉತ್ತೀರ್ಣರಾಗಿದ್ದು, ಭಾರತ ತಂಡಕ್ಕೆ ಮರಳುವ ಹಾದಿ ಸುಗಮಗೊಂಡಿದೆ.

ಫಿಟ್ನೆಸ್​ ಪರೀಕ್ಷೆಯಲ್ಲಿ ರಾಹುಲ್​ ನಿಶ್ಚಿತ ಸಮಯದವರೆಗೆ ಯಾವುದೇ ಎಗ್ಗಿಲ್ಲದೆ ಬ್ಯಾಟಿಂಗ್​ ಮತ್ತು ವಿಕೆಟ್​ ಕೀಪಿಂಗ್​ ಕೌಶಲ ಪ್ರದರ್ಶಿಸುವಲ್ಲಿ ಯಶಸ್ವಿಯಾದರು. ಇದರಿಂದಾಗಿ, ಏಷ್ಯಾಕಪ್​ಗೆ ಸೋಮವಾರ ಪ್ರಕಟಗೊಳ್ಳಲಿರುವ ಭಾರತ ತಂಡದಲ್ಲಿ ಸ್ಥಾನ ಪಡೆಯುವುದು ನಿಶ್ಚಿತವೆನಿಸಿದೆ. ಅಲ್ಲದೆ, ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ ಜತೆಗೆ ವಿಕೆಟ್​ ಕೀಪರ್​ ಆಗಿಯೂ ಅವರು ಆಡಲಿದ್ದಾರೆ. ಏಕದಿನ ಕ್ರಿಕೆಟ್​ನಲ್ಲಿ 4ನೇ ಕ್ರಮಾಂಕದಲ್ಲಿ ಆಡಿದ 7 ಇನಿಂಗ್ಸ್​ಗಳಲ್ಲಿ 1 ಶತಕ ಸಹಿತ 40.17ರ ಸರಾಸರಿಯಲ್ಲಿ 241 ರನ್​ ಗಳಿಸಿರುವ ರಾಹುಲ್​, ಟೀಮ್​ ಇಂಡಿಯಾದ ಬಲುದೊಡ್ಡ ತಲೆನೋವು ದೂರ ಮಾಡುವ ನಿರೀೆ ಇದೆ. ಕಳೆದ ಮಾರ್ಚ್​ 22ರಂದು ಚೆನ್ನೆ$ನಲ್ಲಿ ಆಸ್ಟ್ರೆಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ರಾಹುಲ್​ ಕೊನೆಯದಾಗಿ ಭಾರತ ಪರ ಆಡಿದ್ದರು.

ಫಿಟ್​ ಆಗದ ಶ್ರೇಯಸ್​: ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಮತ್ತೋರ್ವ ಬ್ಯಾಟರ್​ ಶ್ರೇಯಸ್​ ಅಯ್ಯರ್​ ಇನ್ನೂ ಸಂಪೂರ್ಣ ಫಿಟ್​ ಆಗಿಲ್ಲ. ಅವರು ಇನ್ನೂ ಕೆಲ ದಿನಗಳ ಬಳಿಕ ಫಿಟ್ನೆಸ್​ ಪರೀೆ ಎದುರಿಸಲಿದ್ದಾರೆ. ಹೀಗಾಗಿ ಏಷ್ಯಾಕಪ್​ ತಂಡದಲ್ಲಿ ಅವರ ಸ್ಥಾನ ಅನಿಶ್ಚಿತವೆನಿಸಿದೆ.

ಆಯ್ಕೆ ಸಮಿತಿ ಸಭೆಗೆ ರೋಹಿತ್​

ಏಷ್ಯಾಕಪ್​ಗೆ ಭಾರತ ತಂಡದ ಆಯ್ಕೆಗೆ ಅಜಿತ್​ ಅಗರ್ಕರ್​ ನೇತೃತ್ವದ ಆಯ್ಕೆ ಸಮಿತಿ ಸೋಮವಾರ ನವದೆಹಲಿಯಲ್ಲಿ ಸಭೆ ಸೇರಲಿದ್ದು, ನಾಯಕ ರೋಹಿತ್​ ಶರ್ಮ ಕೂಡ ಇದರಲ್ಲಿ ಭಾಗವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net