

KL Rahul: ಆಂಡರ್ಸನ್-ತೆಂಡೂಲ್ಕರ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ಕೆಎಲ್ ರಾಹುಲ್ರನ್ನು ಮಾಜಿ ಕ್ರಿಕೆಟಿಗ ಆಶಿಶ್ ನೆಹ್ರಾ ಶ್ಲಾಘಿಸಿದ್ದಾರೆ.
ಖಾಸಗಿ ವಾಹಿನಿಯೊಂದರಲ್ಲಿ ಮಾತನಾಡಿರುವ ಹಿರಿಯ ವೇಗಿ, ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಿವೃತ್ತಿಯ ನಂತರ ಅವರ ಅನುಪಸ್ಥಿತಿಯಲ್ಲಿ, ರಾಹುಲ್ ಭಾರತದ ಟೆಸ್ಟ್ ತಂಡದಲ್ಲಿ ಅತ್ಯಂತ ಅನುಭವಿ ಬ್ಯಾಟ್ಸ್‌ಮನ್ ತಮ್ಮ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ ಮತ್ತು ಐದು ಪಂದ್ಯಗಳ ಸರಣಿಯ 2-2 ರಿಂದ ಸಮಬಲಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.
ಒತ್ತಡದ ಸಂದರ್ಭದಲ್ಲಿಯೂ ರಾಹುಲ್ ಮೈದಾನದಲ್ಲಿ ಶಾಂತತೆ ಮತ್ತು ಆತ್ಮವಿಶ್ವಾಸದಿಂದ ಕಾಣುತ್ತಿದ್ದರು, ಅವರ ಪ್ರಬುದ್ಧತೆ ಮತ್ತು ಜವಾಬ್ದಾರಿ ಪ್ರಜ್ಞೆ ತಂಡದಲ್ಲಿನ ಯುವ ಆಟಗಾರರಿಗೆ ಮಾದರಿ. ಈ ಸರಣಿಯಲ್ಲಿ ರಾಹುಲ್ಗೆ ಅಗ್ರ ಕ್ರಮಾಂಕದಲ್ಲಿ ಅವರಿಗೆ ಇಷ್ಟವಾದ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿತು, ಇದು ಅವರನ್ನು ಸರಣಿಯಲ್ಲಿ ಸ್ಥಿರವಾಗಿರಲು ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.
ರಾಹುಲ್ ಈ ಟೂರ್ನಿಯ 10 ಇನ್ನಿಂಗ್ಸ್‌ಗಳಲ್ಲಿ 53.2 ಸರಾಸರಿಯಲ್ಲಿ 532 ರನ್ ಗಳಿಸಿದ್ದಾರೆ. ಇದರಲ್ಲಿ 2 ಶತಕಗಳು ಮತ್ತು 2 ಅರ್ಧಶತಕಗಳು ಸೇರಿವೆ.(ಏಜೆನ್ಸೀಸ್)