ಮಗಳ ಮದುವೆ ಸಂಭ್ರಮದಲ್ಲಿ ಸುನೀಲ್ ಶೆಟ್ಟಿ ಪಂಚೆ ಉಟ್ಟು ಕ್ಯಾಮೆರಾ ಮುಂದೆ ಬಂದಿದ್ದು, ನಾನೀಗ ಅಧಿಕೃತವಾಗಿ ಮಾವ ಆಗಿದ್ದೇನೆ ಎಂದು ಸಂತಸದಿಂದ ಹೇಳಿಕೊಂಡಿದ್ದಾರೆ. ಸದ್ಯ ಆಥಿಯಾ ಶೆಟ್ಟಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಮದುವೆಯ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಅವರ ಅಪಾರ ಸಂಖ್ಯೆಯ ಅಭಿಮಾನಿಗಳು ಇದೀಗ ಶುಭಾಶಯ ತಿಳಿಸುತ್ತಿದ್ದಾರೆ.