ಮುಂಬೈ ಇಂಡಿಯನ್ಸ್​ ಬೌಲಿಂಗ್​ ದಾಳಿಗೆ ತತ್ತರಿಸಿದ ಕೆಕೆಆರ್​! 116ಕ್ಕೆ ಆಲ್​ಔಟ್​ | MI vs KKR

ವಿಜಯವಾಣಿ - 2025-03-31T210532.912
Published on

MI vs KKR: ಇಂದು (ಮಾ.31) ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್​ 18ನೇ ಆವೃತ್ತಿಯ 12ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತ ನೈಟ್ ರೈಡರ್ಸ್​ ತಂಡಗಳು ಮುಖಾಮುಖಿಯಾಗಿ ಸೆಣಸಾಡುತ್ತಿವೆ. ಟಾಸ್​ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಎಂಐ, ತಾನು ಅಂದುಕೊಂಡಂತೆ ಎದುರಾಳಿ ತಂಡದ ಬ್ಯಾಟರ್​ಗಳ ಬೆವರಿಳಿಸುವಲ್ಲಿ ಯಶಸ್ವಿಯಾಗಿದೆ.

ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಹಾರ್ದಿಕ್ ಪಾಂಡ್ಯ, ಕೆಕೆಆರ್​ಗೆ ಬ್ಯಾಟ್ ಮಾಡುವಂತೆ ಆಹ್ವಾನಿಸಿದರು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಕೋಲ್ಕತ ಪಡೆ, ಕೇವಲ 116 ರನ್​ಗೆ ಆಲೌಔಟ್ ಆಗಿದೆ. ಇದು ಈ ಬಾರಿ ಐಪಿಎಲ್​ನ ಅತ್ಯಂತ ಕಡಿಮೆ ರನ್​ಸ್ಕೋರ್​ ಎಂಬ ಪಟ್ಟಿಗೆ ಸೇರಿಕೊಂಡಿದೆ. ​

ಕೆಕೆಆರ್​ ಪರ ಕಣಕ್ಕಿಳಿದ ಆರಂಭಿಕ ಬ್ಯಾಟರ್​ಗಳೇ ಶೀಘ್ರವೇ ವಿಕೆಟ್​ ಒಪ್ಪಿಸಿ, ಪೆವಿಲಿಯನ್​ ಹಾದಿ ಹಿಡಿದರು. ಇದೇ ಹಾದಿಯಲ್ಲಿ ಸಾಗಿದ ಉಳಿದ ಬ್ಯಾಟರ್​ಗಳು, ಹೆಚ್ಚು ಕಾಲ ಕ್ರೀಸ್​ಗೆ ನಿಲ್ಲದೇ ಒಬ್ಬರಂತೆ ಮತ್ತೊಬ್ಬರು ವಿಕೆಟ್​ ಕಳೆದುಕೊಂಡರು. ಇನ್ನು ಮುಂಬೈ ಬೌಲರ್​ ಅಶ್ವನಿ ಕುಮಾರ್​, 3 ಓವರ್​ಗೆ ಕೇವಲ 24 ರನ್ ಕೊಟ್ಟು, ಬರೋಬ್ಬರಿ 4 ವಿಕೆಟ್​ಗಳನ್ನು ಪಡೆದು ತಂಡದ ಪರ ಮಿಂಚಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net