ಧೋನಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಲು ಈ ಕನ್ನಡಿಗ ಕಾರಣ..!

dhoni_web2
Published on

ಬೆಂಗಳೂರು: ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ವೃತ್ತಿ ಹಾಗೂ ವೈಯಕ್ತಿಕ ಜೀವನವೇ ರೋಚಕ. ಮಧ್ಯಮ ವರ್ಗ ಕುಟುಂಬದಿಂದ ಬಂದ ಧೋನಿ ನಾಯಕತ್ವದಲ್ಲಿಯೇ ಭಾರತ 2 ವಿಶ್ವಕಪ್ ಜಯಿಸಿದ್ದು ಈಗ ಇತಿಹಾಸ. ಧೋನಿ ಸಾಧನೆಗಾಗಿ ಅವರ ಜೀವನ ಆಧಾರಿತ ಸಿನಿಮಾ ಕೂಡ ಬಂದಾಯಿತು. 2011ರ ವಿಶ್ವಕಪ್ ಜಯಿಸುವವರೆಗೂ ವೃತ್ತಿಜೀವನದ ಪ್ರಮುಖ ಘಟನೆಗಳನ್ನು ಚಿತ್ರಿಸಲಾಗಿದೆ. ಧೋನಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಲು ರಹದಾರಿಯಾದ ದೇವಧರ್ ಟ್ರೋಫಿ ಪಂದ್ಯಕ್ಕಿಂತ ಮುಖ್ಯವಾಗಿ, ಇದಕ್ಕೂ ಮುನ್ನ ನಡೆದ ರಣಜಿ ಪಂದ್ಯವೇ ಪ್ರಮುಖ ಎಂದು ಅಂದಿನ ಆಯ್ಕೆ ಸಮಿತಿ ಮುಖ್ಯಸ್ಥ ಸಯ್ಯದ್ ಕಿರ್ಮಾನಿ ಬಹಿರಂಗಪಡಿಸಿದ್ದಾರೆ.

2016ರಲ್ಲಿ ‘ಎಂಎಸ್ ಧೋನಿ: ಅನ್‌ಟೋಲ್ಡ್ ಸ್ಟೋರಿ’ ಹೆಸರಿನಲ್ಲಿ ಧೋನಿ ಜೀವನ ಆಧಾರಿತ ಸಿನಿಮಾ ಕೂಡ ತೆರೆಕಂಡಿತು.

ಈ ಚಿತ್ರವನ್ನು ನೋಡದ ಧೋನಿ ಅಭಿಮಾನಿಗಳಿಲ್ಲ. ಧೋನಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಲು 2004ರ ದೇವಧರ್ ಟ್ರೋಫಿ ಪಂದ್ಯದಲ್ಲಿ ಪೂರ್ವ ವಲಯ ಪರ ಧೋನಿ ತೋರಿದ ಅಬ್ಬರದ ಬ್ಯಾಟಿಂಗ್ ಕಾರಣದ ಎಂದು ಚಿತ್ರಿಸಲಾಗಿದೆ. ಈ ಪಂದ್ಯದಲ್ಲಿ ಧೋನಿ ಸ್ಫೋಟಕ ಬ್ಯಾಟಿಂಗ್ ತೋರಿದ್ದರು. ಈ ವೇಳೆ ಮೈದಾನದಲ್ಲಿ ಹಾಜರಾಗಿದ್ದ ಆಯ್ಕೆ ಸಮಿತಿ ಸದಸ್ಯರು ವಿಕೆಟ್ ಕೀಪಿಂಗ್-ಬ್ಯಾಟ್ಸ್‌ಮನ್ ಧೋನಿಗೆ ರಾಷ್ಟ್ರೀಯ ತಂಡಕ್ಕೆ ಮಣೆ ಹಾಕಿದರು. ಆದರೆ, ಪೂರ್ವ ವಲಯಕ್ಕೆ ಧೋನಿ ಆಯ್ಕೆಯಾಗಲು ಕಿರ್ಮಾನಿ ಪ್ರಮುಖ ಕಾರಣವಂತೆ.

ಕಿರ್ಮಾನಿ ಕಣ್ಣಿಗೆ ಬಿದ್ದ ಧೋನಿ

ಜಾರ್ಖಂಡ್ ರಾಜ್ಯದ ಧೋನಿ ರಣಜಿ ಪಂದ್ಯವೊಂದರಲ್ಲಿ ತೋರಿದ ಅದ್ಭುತ ಬ್ಯಾಟಿಂಗ್ ಮಾಡಿದ್ದರಂತೆ. ಈ ವೇಳೆ ಪ್ರಣಬ್ ರಾಯ್ (ಅಂದಿನ ಪೂರ್ವ ವಲಯ ಆಯ್ಕೆಗಾರ) ಜತೆ ಪಂದ್ಯ ವೀಕ್ಷಿಸುತ್ತಿದ್ದೆ. ‘ಜಾರ್ಖಂಡ್ ರಾಜ್ಯದ ವಿಕೆಟ್ ಕೀಪರ್, ಉತ್ತಮ ಬ್ಯಾಟ್ಸ್‌ಮನ್ ಕೂಡ ಹೌದು. ಆಯ್ಕೆಗೆ ಸಮರ್ಥ ಆಟಗಾರ ಎಂದು ಪ್ರಣಬ್ ರಾಯ್ ನನಗೆ ತಿಳಿಸಿದರು. ಈ ಪಂದ್ಯದಲ್ಲಿ ಧೋನಿ ವಿಕೆಟ್ ಕೀಪಿಂಗ್ ಮಾಡದೆ, ೈನ್ ಲೆಗ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದರು. ನಾನು ಧೋನಿ ವಿಕೆಟ್ ಕೀಪಿಂಗ್ ಕೌಶಲ ಗಮನಿಸದೆ ನೇರವಾಗಿ ದೇವಧರ್ ಟ್ರೋಫಿಯಲ್ಲಿ ಆಡಲು ಪೂರ್ವ ವಲಯಕ್ಕೆ ಆಯ್ಕೆ ಮಾಡಿದೆ ಎಂದು ಕಿರ್ಮಾನಿ ಹೇಳಿಕೊಂಡಿದ್ದಾರೆ. ಬಳಿಕ ನಡೆದಿದ್ದೆಲ್ಲಾ ಇತಿಹಾಸ...

ನಯನ್ ಮೊಂಗಿಯಾ ಮ್ಯಾಚ್ ಫಿಕ್ಸಿಂಗ್‌ನಿಂದಾಗಿ ತಂಡದಿಂದ ಹೊರಬಿದ್ದ ಬಳಿಕ ರಾಷ್ಟ್ರೀಯ ತಂಡಕ್ಕೆ ಸೂಕ್ತ ವಿಕೆಟ್ ಕೀಪಿಂಗ್ ಕೊರತೆ ಕಾಡಿತು. ಸಾಬಾ ಕರೀಂ ಕೀಪಿಂಗ್ ವೇಳೆ ಕಣ್ಣಿಗೆ ಪೆಟ್ಟುಮಾಡಿಕೊಂಡಿದ್ದರು. 2003ರ ಏಕದಿನ ವಿಶ್ವಕಪ್‌ನಲ್ಲಿ ರಾಹುಲ್ ದ್ರಾವಿಡ್ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿಭಾಯಿಸಿದ್ದರು. ಬಳಿಕ ಮುಂಬೈನ ಸಮೀರ್ ದಿಘೆ, ಹರಿಯಾಣದ ಅಜಯ್ ರಾತ್ರ, ಬಂಗಾಳದ ದೀಪ್‌ದಾಸ್ ಗುಪ್ತಾ ಬಂದರೂ ಕಾಯಂ ಸ್ಥಾನ ಪಡೆಯಲು ವಿಲರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net