19ನೇ ವಯಸ್ಸಿಗೇ ಮದುವೆಯಾದ ಕಿಂಗ್ಸ್​ 11 ಪಂಜಾಬ್​ ಆಟಗಾರ

punjab
Published on

ಕಾಬುಲ್​: ಐಪಿಎಲ್​ ಮುಗಿಯುತ್ತಿದ್ದಂತೆ ಭಾರತೀಯ ಕ್ರಿಕೆಟ್​ ತಂಡವು ಆಸ್ಟ್ರೇಲಿಯಾ ಸೇರಿದೆ. ಆದರೆ ಕಿಂಗ್ಸ್​ 11 ಪಂಜಾಬ್​ ತಂಡದ ಆಟಗಾರನೊಬ್ಬ ತನ್ನ ಬದುಕಿನ ಮತ್ತೊಂದು ಇನ್ನಿಂಗ್​ ಆರಂಭಿಸಿದ್ದಾರೆ. ಈಗಿನ್ನೂ 19ನೇ ವರ್ಷ ದಾಟಿರುವ ಈ ಕ್ರಿಕೆಟಿಗ ಆಗಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಅಫ್ಘಾನಿಸ್ತಾನದ ಸ್ಪಿನ್ನರ್​ ಮುಜೀದ್​ ಉರ್​ ರಹಮಾನ್​ ಇದೀಗ ಮದುವೆಯಾಗಿರುವ ಕ್ರಿಕೆಟಿಗ. ಇವರು ಈ ವರ್ಷದ ಐಪಿಎಲ್​ನಲ್ಲಿ ಪಂಜಾಬ್​ ತಂಡದಿಂದ ಫೀಲ್ಡಿಗಿಳಿದಿದ್ದರು. ಮುಜೀಬ್​ಗೆ ಕಳೆದ ವರ್ಷ ಅಕ್ಟೋಬರ್​ನಲ್ಲೇ ನಿಶ್ಚಿತಾರ್ಥವಾಗಿತ್ತು. ಐಪಿಎಲ್​ ಮುಗಿಯುವುದಕ್ಕಾಗಿ ಕಾಯುತ್ತಿದ್ದ ಅವರು, ಶುಕ್ರವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮುಜೀಬ್​ ಅವರ ವಿವಾಹದ ಫೋಟೋ ಮತ್ತು ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಕತ್​ ವೈರಲ್​ ಆಗಿದೆ. ಅನೇಕ ಕ್ರಿಕೆಟಿಗರು ಮತ್ತು ನಾಯಕರು ಮದುವೆಯಲ್ಲಿ ಪಾಲ್ಗೊಂಡಿದ್ದರು. ಅವೆಲ್ಲರು ಒಟ್ಟಾಗಿ ನೃತ್ಯ ಮಾಡುವ ವಿಡಿಯೋಗಳು ಹರಿದಾಡಲಾರಂಭಿಸಿವೆ.

ಮುಜೀಬ್​ ಅವರ ವಯಸ್ಸಿಗೂ ಸಾಧನೆಗೂ ಸಂಬಂಧವೇ ಇಲ್ಲವೆನ್ನುತ್ತಾರೆ ಕ್ರಿಕೆಟ್​ ಪ್ರೇಮಿಗಳು. ದೇಶದ ಕ್ರಿಕೆಟ್​ ಆಟಗಾರರಲ್ಲಿ ಅತಿ ಹೆಚ್ಚು ಉತ್ಸಾಹದಿಂದ ಭಾಗವಹಿಸುವವರು ಅವರು. ಚಿಕ್ಕ ವಯಸ್ಸಿನಲ್ಲೇ ದೊಡ್ಡ ಮಟ್ಟದ ಸಾಧನೆ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net