Kho Kho World Cup 2025: ಚೊಚ್ಚಲ ವಿಶ್ವಕಪ್​ ಗೆದ್ದ ಭಾರತ ಮಹಿಳಾ ತಂಡ

dk (36)
Published on

ದೆಹಲಿ: ದೆಹಲಿಯಲ್ಲಿ ನಡೆದ ಮೊದಲ ಅವೃತ್ತಿಯ ಚೊಚ್ಚಲ ಖೋ-ಖೋ ವಿಶ್ವಕಪ್​ ಪಂದ್ಯದಲ್ಲಿ ಭಾನುವಾರ ನೇಪಾಳ ವಿರುದ್ಧ ಗೆದ್ದು ಬೀಗಿದ ಭಾರತ ಮಹಿಳಾ ತಂಡ ವಿಶ್ವಚಾಂಪಿಯನ್​ ಆಗಿ ಹೊರ ಹೊಮ್ಮಿದೆ.

ಒಂದು ಪಂದ್ಯ ಸೋಲದೆ ಫೈನಲ್​ ಪ್ರವೇಶಿಸಿದ್ದ ಭಾರತ ತಂಡ ನೇಪಾಳವನ್ನು 78-40 ಅಂತರದಿಂದ ಸೋಲಿಸಿ ಚಾಂಪಿಯನ್​ ಆಗಿದೆ.

ಪುರುಷರ ತಂಡ ಕೂಡ ಚಾಂಪಿಯನ್​

ಭಾನುವಾರ ನಡೆದ ಚೊಚ್ಚಲ ಖೋ ಖೋ ವಿಶ್ವಕಪ್‌ನಲ್ಲಿ ರೋಚಕ ಫೈನಲ್‌ನಲ್ಲಿ ನೇಪಾಳವನ್ನು 54-36 ಅಂಕಗಳಿಂದ ಸೋಲಿಸಿದ ಭಾರತೀಯ ಪುರುಷರ ತಂಡವು ಕೂಡ ವಿಶ್ವ ಚಾಂಪಿಯಕನ್​ ಆಗಿ ಹೊರ ಹೊಮ್ಮಿದ್ದು, ಒಂದೇ ದಿನದಲ್ಲಿ ಮಹಿಳಾ ಮತ್ತು ಪುರುಷರ ತಂಡ ಚಾಪಿಯನ್​ ಆಗುವ ಮೂಲಕ ಇತಿಹಾಸ ನಿರ್ಮಿಸಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net