ಖೇಲೋ ಇಂಡಿಯಾ ಯೂತ್​ ಗೇಮ್ಸ್ ಲಾಂಛನ ಅನಾವರಣ

khelo web
Published on

ಚೆನ್ನೈ: ಜನವರಿ 19ರಿಂದ 31ರವರೆಗೆ ನಡೆಯಲಿರುವ 6ನೇ ಆವೃತ್ತಿಯ ಖೇಲೋ ಇಂಡಿಯಾ ಯೂತ್​ ಗೇಮ್ಸ್​ಗೆ ತಮಿಳುನಾಡು ಆತಿಥ್ಯ ವಹಿಸಿಕೊಳ್ಳಲಿದ್ದು, ಕ್ರೀಡಾಕೂಟದ ಲಾಂಛನ ಮತ್ತು ಲಾಂಛನಪ್ರಾಣಿಯನ್ನು ಕೇಂದ್ರ ಕ್ರೀಡಾ ಸಚಿವ ಅನುರಾಗ್​ ಠಾಕೂರ್​ ಶುಕ್ರವಾರ ಅನಾವರಣಗೊಳಿಸಿದರು.

ಯೂತ್​ ಗೇಮ್ಸ್​ನ ಹಿಂದಿನ 5 ಆವೃತ್ತಿಗಳಿಗೆ ದೆಹಲಿ, ಪುಣೆ, ಗುವಾಹಟಿ, ಪಂಚಕುಲಾ ಮತ್ತು ಭೋಪಾಲ್​ ಆತಿಥ್ಯ ವಹಿಸಿದ್ದರೆ, ಈ ಬಾರಿ ತಮಿಳುನಾಡಿನ ಚೆನ್ನೆ$ನ, ತಿರುಚಿ, ಮಧುರೈ ಮತ್ತು ಕೊಯಂಬತ್ತೂರಿನಲ್ಲಿ ಸ್ಪರ್ಧೆಗಳು ನಡೆಯಲಿವೆ.

ಲಾಂಛನ ಅನಾವರಣ ಕಾರ್ಯಕ್ರಮದಲ್ಲಿ ತಮಿಳುನಾಡಿನ ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್​, 5 ಬಾರಿಯ ಚೆಸ್​ ವಿಶ್ವ ಚಾಂಪಿಯನ್​ ವಿಶ್ವನಾಥನ್​ ಆನಂದ್​, ಒಲಿಂಪಿಯನ್​ ೆನ್ಸರ್​ ಭವಾನಿ ದೇವಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net