

ಚೆನ್ನೈ: ಐಪಿಎಲ್ನ ಸುಪ್ರಸಿದ್ದ ಪ್ರಾಂಚೈಸಿಗಳು ಒಂದರ ಹಿಂದರಂತೆ ಹಂಡ್ರೆಡ್ ಲೀಗ್ ಪ್ರವೇಶಿಸುತ್ತಿದ್ದು, ಮುಂಬೈ ಇಂಡಿಯನ್ಸ್ ಹಾಗೂ ಎಲ್ಎಸ್ಜಿ ಈಗಾಗಲೇ ತಂಡಗಳನ್ನು ಖರೀದಿಸುವ ಮೂಲಕ ಲೀಗ್ಗೆ ಎಂಟ್ರಿ ನೀಡಿವೆ. ಇದೀಗ 17ನೇ ಆವೃತ್ತಿಯ ರನ್ನರ್ಅಪ್ ಸನ್‌ರೈಸರ್ಸ್ ಹೈದರಾಬಾದ್ (SRH) ಫ್ರಾಂಚೈಸಿ ಮಾಲೀಕರು ಕೂಡ ಹಂಡ್ರೆಡ್ ಲೀಗ್ಗೆ ಎಂಟ್ರಿ ಕೊಟ್ಟಿದ್ದು, ಭಾರೀ ಮೊತ್ತಕ್ಕೆ ತಂಡವೊಂದರ ಸಂಪೂರ್ಣ ಷೇರುಗಳನ್ನ ಸ್ವಾದೀನಪಡಿಸಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದೆ.
ಹಂಡ್ರೆಡ್ ಲೀಗ್ಗೆ ನಡೆದ ಬಿಡ್ಡಿಂಗ್ನಲ್ಲಿ ಸನ್‌ರೈಸರ್ಸ್ (SRH) ತಂಡವು ನಾರ್ದರ್ನ್ ಸೂಪರ್‌ಚಾರ್ಜರ್ಸ್‌ನಲ್ಲಿ ಸುಮಾರು 100 ಮಿಲಿಯನ್ ಬ್ರಿಟಿಷ್ ಪೌಂಡ್‌ಗಳಿಗೆ ಶೇಕಡಾ 100 ರಷ್ಟು ಪಾಲನ್ನು ಪಡೆದುಕೊಂಡಿದೆ ಎಂದು ವರದಿಯಾಗಿದೆ. ಅಂದರೆ ಭಾರತೀಯ ರೂಪಾಯಿಯ ಪ್ರಕಾರ 1094 ಕೋಟಿ ರೂ ಆಗಿದೆ. ಸನ್ ಗ್ರೂಪ್ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಹಾಗೂ ದಕ್ಷಿಣ ಆಫ್ರಿಕಾದ ಟಿ20 ಲೀಗ್‌ನಲ್ಲಿ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ತಂಡಗಳ ಮಾಲಿಕತ್ವವನ್ನ ಹೊಂದಿದೆ. ಈ ಮೂಲಕ ಸನ್ ಗ್ರೂಪ್ ಮೂರನೇ ಫ್ರಾಂಚೈಸಿ ಲೀಗ್ ತಂಡ ಸೇರಿಕೊಂಡಿದೆ.
ಈ ಮೊದಲು ಮುಂಬೈ ಇಂಡಿಯನ್ಸ್ ತಂಡವು ಓವಲ್ ಇನ್ವಿನ್ಸಿಬಲ್ಸ್ ತಂಡದಲ್ಲಿ ಪಾಲನ್ನು ಖರೀದಿಸಿತು. ಆ ಬಳಿಕ ಲಖನೌ ಸೂಪರ್ಜೈಂಟ್ಸ್ ತಂಡವು ಮ್ಯಾಂಚೆಸ್ಟರ್ ಒರಿಜಿನಲ್ಸ್ ತಂಡ ಶೇ49ರಷ್ಟು ಪಾಲನ್ನು ಖರೀದಿಸಿತು. ಇದೀಗ ಸನ್ ಗ್ರೂಪ್ಸ್ ಶೇ. 100ರಷ್ಟು ಪಾಲನ್ನು ಖರೀದಿಸುವ ಮೂಲಕ ಕ್ರೀಢಾ ವಲಯದಲ್ಲಿ ಸದ್ದು ಮಾಡುತ್ತಿದೆ.