

Kavya Maran: ಕಳೆದ ಸೀಸನ್ನಲ್ಲಿ 20 ಓವರ್ ಅಂತ್ಯಕ್ಕೆ 287 ರನ್ಗಳನ್ನು ಸಿಡಿಸುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ರನ್ ದಾಖಲಿಸಿದ ತಂಡ ಎಂಬ ದಾಖಲೆಗೆ ಸಾಕ್ಷಿಯಾಗಿದ್ದ ಎಸ್ಆರ್ಎಚ್, ಇಂದಿನ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಬರೋಬ್ಬರಿ 286 ರನ್ ಕಲೆಹಾಕಿತು. ಎಸ್ಆರ್ಎಚ್ ನೀಡಿದ 287 ಬೃಹತ್ ಮೊತ್ತದ ಗುರಿಯನ್ನು ಬೆನ್ನಟ್ಟಿರುವ ರಾಜಸ್ಥಾನ ಪಡೆ, ಭಾರೀ ಪೈಪೋಟಿಯಲ್ಲಿ ತೊಡಗಿದೆ.
ಹೈದರಾಬಾದ್ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಎಸ್ಆರ್ಎಚ್ ಪರ ಇಶಾನ್ ಕಿಶನ್ ಮತ್ತು ಟ್ರಾವಿಸ್ ಹೆಡ್ ಅಬ್ಬರದ ಬ್ಯಾಟಿಂಗ್ ನಡೆಸಿದರು. ಇವರಿಬ್ಬರ ಪೈಕಿ ಹೆಡ್ ಮೈದಾನದ ಸುತ್ತಮುತ್ತ ಸ್ಫೋಟಕ ಸಿಕ್ಸರ್ಗಳನ್ನು ಸಿಡಿಸಿದರು. ಇದರಲ್ಲಿ ಒಂದು ಸಿಕ್ಸರ್ 105 ಮೀ. ಹೋಗಿದ್ದು, ಸ್ಟೇಡಿಯಂನಲ್ಲಿ ಜಮಾಯಿಸಿದ್ದ ಕ್ರಿಕೆಟ್ ಅಭಿಮಾನಿಗಳ ಹುಬ್ಬೇರಿಸಿತು.
ತಾನೊಬ್ಬ ಬಲಿಷ್ಠ ಬ್ಯಾಟರ್ ಎಂಬುದನ್ನು 105 ಮೀ. ಸ್ಫೋಟಕ ಸಿಕ್ಸರ್ ಮೂಲಕ ಮತ್ತೊಮ್ಮೆ ಅಭಿಮಾನಿಗಳ ಮುಂದೆ ಸಾಬೀತುಪಡಿಸಿದ ಟ್ರಾವಿಸ್, ಕೇವಲ ಫ್ಯಾನ್ಸ್ಗಳನ್ನು ಮಾತ್ರವಲ್ಲದೇ ತಮ್ಮ ಫ್ರಾಂಚೈಸಿಯ ಮಾಲೀಕಿ ಕಾವ್ಯಾ ಮಾರನ್ರನ್ನು ಖುಷಿ ಪಡಿಸುವಲ್ಲಿ ಯಶಸ್ವಿಯಾದರು. ಹೆಡ್ ಬಾರಿಸಿದ ಸಿಕ್ಸರ್ ನೋಡಿದ ಕಾವ್ಯ ಮಾರನ್, ಕ್ಯಾಮರಾ ಕಣ್ಣಿಗೆ ಸೆರೆಯಾಗುವಂತೆ ತಮ್ಮ ಆಶ್ಚರ್ಯ, ಖುಷಿಯನ್ನು ವ್ಯಕ್ತಪಡಿಸಿದರು. ಸದ್ಯ ಈ ದೃಶ್ಯಗಳು ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ,(ಏಜೆನ್ಸೀಸ್).