ಕರ್ನಾಟಕ ಕುಸ್ತಿ ಸಂಘ ಹಾಗೂ ಭಾರತೀಯ ಶೈಲಿಯ ಕುಸ್ತಿ ಸಂಘಗಳು ವ್ಯಾಪ್ತಿ ಬೇರೆ ಬೇರೆ

wresling web
Published on

ಬೆಂಗಳೂರು: ಕರ್ನಾಟಕ ಕುಸ್ತಿ ಸಂಘ (ರಿ) ಹಾಗೂ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಭಾರತೀಯ ಶೈಲಿಯ ಕುಸ್ತಿ ಸಂಘದ ವ್ಯಾಪ್ತಿಗಳು ಬೇರೆ ಬೇರೆಯಾಗಿವೆ ಎಂದು ಕರ್ನಾಟಕ ಕುಸ್ತಿ ಸಂಘ (ರಿ) ದ ತಾಂತ್ರಿಕ ಅಧಿಕಾರಿ ಡಾ. ವಿನೋದ್‌ ಕುಮಾರ್‌ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು, ಕರ್ನಾಟಕ ಕುಸ್ತಿ ಸಂಘವು (KWA) ಯುನೈಟೆಡ್‌ ವರ್ಲ್ಡ್‌ ರೆಸ್ಲಿಂಗ್‌ (U.W.W) ಮತ್ತು ಭಾರತ ಸರ್ಕಾರ ಹಾಗೂ ಭಾರತೀಯ ಒಲಿಂಪಿಕ್‌ ಅಸೋಸಿಯೇಷನ್‌ನಿಂದ (IOA)ಮಾನ್ಯತೆ ಪಡೆದಿರುವ ಭಾರತೀಯ ಕುಸ್ತಿ ಸಂಘದಿಂದ (WFI) ಮಾನ್ಯತೆ ಪಡೆದಿರುತ್ತಾರೆ ಎಂದಿದ್ದಾರೆ.

ಈ ಸಂಸ್ಥೆಯ ಕಾರ್ಯವೈಖರಿ ಏನೆಂದರೆ, ತಾಲ್ಲೂಕು ಚಾಂಪಿಯನ್‌ಷಿಪ್‌, ಜಿಲ್ಲಾ ಚಾಂಪಿಯನ್‌ಷಿಪ್‌, ರಾಜ್ಯ ಚಾಂಪಿಯನ್‌ಷಿಪ್‌ ನಡೆಸುವ ಜವಾಬ್ದಾರಿ ಇರುತ್ತದೆ ಹಾಗೂ ಈ ಸಂಸ್ಥೆ ಮಾತೃ ಸಂಸ್ಥೆಯ ಅಡಿಯಲ್ಲಿ ರಾಷ್ಟ್ರೀಯ ಚಾಂಪಿಯನ್‌ಷಿಪ್‌, ಒಲಿಂಪಿಕ್ ಗೇಮ್ಸ್‌, ಏಷ್ಯನ್​ ಗೇಮ್ಸ್‌, ವಿಶ್ವ ಚಾಂಪಿಯನ್‌ಷಿಪ್‌ಗಳಿಗೆ ಭಾರತ ತಂಡದ ಆಯ್ಕೆ ಮತ್ತು ತರಬೇತಿಯ ಜಬಾಬ್ದಾರಿಯನ್ನು ಹೊಂದಿರುತ್ತದೆ ಎಂದು ಈ ಮೂಲಕ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net