ಮೊಟ್ಟ ಮೊದಲ ಬಾರಿಗೆ ಸಿ.ಕೆ. ನಾಯ್ಡು ಟ್ರೋಫಿ ಜಯಿಸಿದ ಕರ್ನಾಟಕ

CK Naidu Trophy
Published on

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕರ್ನಾಟಕ ಹಾಗೂ ಉತ್ತರಪ್ರದೇಶ ನಡುವಿನ 23 ವಯೋಮಿತಿಯ ಸಿ.ಕೆ. ನಾಯ್ಡು ಟ್ರೋಫಿ ಫೈನಲ್​ ಪಂದ್ಯ ಡ್ರಾ ಗೊಂಡಿದ್ದು ಮೊದಲ ಇನ್ನಿಂಗ್ಸ್​ ಆಧಾರದಲ್ಲಿ ಅತಿಥೇಯರು ಚೊಚ್ಚಲ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ಕರ್ನಾಟಕ ನಿರ್ಧರಿಸಿತು. ಮೊದಲ ಇನ್ನಿಂಗ್ಸ್‌ನಲ್ಲಿ ಕರ್ನಾಟಕ 358 ರನ್‌ಗಳಿಗೆ ಆಲೌಟ್ ಆಯಿತು. ಮೊದಲನೇ ಇನ್ನಿಂಗ್ಸ್​ ಆಡಿದ ಉತ್ತರಪ್ರದೇಶ 139 ರನ್​ಗಳಿಗೆ ಆಲೌಟ್​ ಆಯಿತು. 219 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ಬರೋಬ್ಬರಿ 585 ರನ್‌ಗಳನ್ನು ಕಲೆಹಾಕಿತು. ಈ ಮೂಲಕ ಕರ್ನಾಟಕ 804 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿತು.

ಗೆಲುವಿಗೆ 804 ರನ್​​ಗಳ ಬೃಹತ್ ಗುರಿ ಪಡೆದಿದ್ದ ಉತ್ತರ ಪ್ರದೇಶ ತಂಡ ಅಂತಿಮ ದಿನದಾಟದಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು ಕೇವಲ 174 ರನ್​ ಕಲೆಹಾಕಲಷ್ಟೇ ಶಕ್ತವಾಯಿತು. ಹೀಗಾಗಿ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತು. ಆದರೆ,ಮೊದಲ ಇನ್ನಿಂಗ್ಸ್​ನಲ್ಲಿ 358 ರನ್ ಕಲೆಹಾಕಿ ಮುನ್ನಡೆ ಕಾಯ್ದುಕೊಂಡಿದ್ದ ಕರ್ನಾಟಕ ತಂಡ ಇನ್ನಿಂಗ್ಸ್ ಮುನ್ನಡೆಯ ಆಧಾರದ ಮೇಲೆ ಪ್ರಶಸ್ತಿ ಜಯಿಸುವಲ್ಲಿ ಯಶಸ್ವಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net