ರಣಜಿ ಟ್ರೋಫಿಗೆ ಕರ್ನಾಟಕದ ಸಂಭಾವ್ಯರಲ್ಲಿ ಯುವ ಪ್ರತಿಭೆಗಳಿಗೆ ಮಣೆ

kar ranji web
Published on

ಬೆಂಗಳೂರು: ಮುಂಬರುವ ರಣಜಿ ಟ್ರೋಫಿ 89ನೇ ಆವೃತ್ತಿಗೆ 8 ಬಾರಿಯ ಚಾಂಪಿಯನ್​ ಕರ್ನಾಟಕದ 32 ಸಂಭಾವ್ಯ ಆಟಗಾರರ ತಂಡ ಪ್ರಕಟಗೊಂಡಿದೆ. ರಾಷ್ಟ್ರೀಯ ತಂಡದ ಆಟಗಾರರಾದ ಕೆಎಲ್​ ರಾಹುಲ್​ ಮತ್ತು ಪ್ರಸಿದ್ಧಕೃಷ್ಣ ಕೂಡ ಸಂಭಾವ್ಯರಲ್ಲಿ ಸ್ಥಾನ ಪಡೆದಿದ್ದು, ಕಿರಿಯರ ಕ್ರಿಕೆಟ್​ನಲ್ಲಿ ಮಿಂಚಿರುವ ಹಲವು ಯುವ ಆಟಗಾರರು ತಂಡದಲ್ಲಿದ್ದಾರೆ. ಇದರೊಂದಿಗೆ ಜೆ. ಅಭಿರಾಮ್​ ನೇತೃತ್ವದ ಆಯ್ಕೆ ಸಮಿತಿ, ಭವಿಷ್ಯದ ತಂಡ ಕಟ್ಟುವತ್ತ ಕಣ್ಣಿಟ್ಟಿರುವುದು ಸ್ಪಷ್ಟವಾಗಿದೆ.

17 ವರ್ಷದ ಎಡಗೈ ಸ್ಪಿನ್ನರ್​ ಹಾರ್ದಿಕ್​ ರಾಜ್​, 20 ವರ್ಷದ ಆಲ್ರೌಂಡರ್​ ಯಶೋವರ್ಧನ್​ ಪರಂತಾಪ್​, 20 ವರ್ಷದ ಎಡಗೈ ಬ್ಯಾಟರ್​ ಆರ್​. ಸ್ಮರಣ್​, 21 ವರ್ಷದ ಸ್ಪಿನ್ನರ್​ ಶಶಿಕುಮಾರ್​ ಕೆ, 20 ವರ್ಷದ ಸ್ಪಿನ್ನರ್​ ಮೊಹ್ಸಿನ್​ ಖಾನ್​, ಬೆಳಗಾವಿಯ ವಿಕೆಟ್​ ಕೀಪರ್​ ಸುಜಯ್​ ಸಾತೇರಿ ಸಂಭಾವ್ಯರಲ್ಲಿರುವ ಹೊಸ ಪ್ರತಿಭೆಗಳಾಗಿದ್ದಾರೆ. ವಿಜಯ್​ ಹಜಾರೆ ಟ್ರೋಫಿಯಲ್ಲಿ ಮಿಂಚಿದ ಅಭಿನವ್​ ಮನೋಹರ್​ ರಣಜಿ ಸಂಭಾವ್ಯರಲ್ಲೂ ಸ್ಥಾನ ಪಡೆದಿದ್ದಾರೆ. ಅನುಭವಿ ವೇಗಿ ರೋನಿತ್​ ಮೋರೆ ಅವಕಾಶ ವಂಚಿತರಾಗಿದ್ದಾರೆ.

ಮುಂದಿನ ವರ್ಷ ಜನವರಿ 5ರಿಂದ ಆರಂಭಗೊಳ್ಳಲಿರುವ ರಣಜಿ ಟ್ರೋಫಿಯಲ್ಲಿ ರಾಜ್ಯ ತಂಡ ಪಂಜಾಬ್​ ವಿರುದ್ಧ ಬೆಂಗಳೂರಿನಲ್ಲೇ ಮೊದಲ ಪಂದ್ಯ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. ಸಂಭಾವ್ಯರಿಂದ 15 ಆಟಗಾರರ ಅಂತಿಮ ತಂಡ ಶೀಘ್ರದಲ್ಲೇ ಪ್ರಕಟಗೊಳ್ಳುವ ನಿರೀಕ್ಷೆ ಇದೆ.

ಸಂಭಾವ್ಯ ತಂಡ: ಕೆಎಲ್​ ರಾಹುಲ್​, ಮಯಾಂಕ್​ ಅಗರ್ವಾಲ್​, ಪ್ರಸಿದ್ಧ ಕೃಷ್ಣ, ಮನೀಷ್​ ಪಾಂಡೆ, ದೇವದತ್​ ಪಡಿಕಲ್​, ಕೆ. ಗೌತಮ್​, ಆರ್​. ಸಮರ್ಥ್​, ವಿದ್ವತ್​ ಕಾವೇರಪ್ಪ, ನಿಕಿನ್​ ಜೋಸ್​, ವಿ. ಕೌಶಿಕ್​, ಶರತ್​ ಶ್ರೀನಿವಾಸ್​ (ವಿ.ಕೀ), ಜೆ. ಸುಚಿತ್​, ಶುಭಾಂಗ್​ ಹೆಗ್ಡೆ, ಎಂ. ವೆಂಕಟೇಶ್​, ಮನೋಜ್​ ಭಾಂಡಗೆ, ಬಿಆರ್​ ಶರತ್​ (ವಿ.ಕೀ), ಹಾರ್ದಿಕ್​ ರಾಜ್​, ಡಿ. ನಿಶ್ಚಲ್​, ಕಿಶನ್​ ಎಸ್​. ಬೆದರೆ, ವಿಶಾನ್​ ಒನತ್​, ರೋಹಿತ್​ ಕುಮಾರ್​ ಎಸಿ, ಯಶೋವರ್ಧನ್​ ಪರಂತಪ್​, ಕೃತಿಕ್​ ಕೃಷ್ಣ (ವಿ.ಕೀ), ಆರ್​. ಸ್ಮರಣ್​, ಅಭಿಲಾಷ್​ ಶೆಟ್ಟಿ, ಶಶಿಕುಮಾರ್​ ಕೆ, ಮೊಹ್ಸಿನ್​ ಖಾನ್​, ಅನೀಶ್​ ಕೆವಿ, ಅನೀಶ್ವರ್​ ಗೌತಮ್​, ಅಭಿನವ್​ ಮನೋಹರ್​, ಸುಜಯ್​ ಸಾತೇರಿ. ಕೋಚ್​: ಪಿವಿ ಶಶಿಕಾಂತ್​, ಬೌಲಿಂಗ್​ ಕೋಚ್​: ಮನ್ಸೂರ್​ ಅಲಿ ಖಾನ್​.

ಕರ್ನಾಟಕದ ಪಂದ್ಯಗಳು

ದಿನಾಂಕ: ಎದುರಾಳಿ (ಎಲ್ಲಿ)

ಜ. 5-8: ಪಂಜಾಬ್​ (ಬೆಂಗಳೂರು)

ಜ. 12-15: ಗುಜರಾತ್​ (ಅಹಮದಾಬಾದ್)​

ಜ. 19-22: ಗೋವಾ (ಮೈಸೂರು)

ಜ. 26-29: ತ್ರಿಪುರ (ಅಗರ್ತಲ)

ಫೆ. 2-5: ರೈಲ್ವೇಸ್​ (ಸೂರತ್)​

ಫೆ. 9-12: ತಮಿಳುನಾಡು (ಚೆನ್ನೈ)

ಫೆ. 16-19: ಚಂಡೀಗಢ (ಹುಬ್ಬಳ್ಳಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net