ಐಪಿಎಲ್​ ಆಟಗಾರರ ಹರಾಜಿನಲ್ಲಿ ಕನ್ನಡಿಗರಿಗೆ ನಿರಾಸೆ; ಕೊನೇಕ್ಷಣದಲ್ಲಿ ಕೆಕೆಆರ್​ ಪಾಲಾದ ಮನೀಷ್​ ಪಾಂಡೆ

manish web
Published on

ದುಬೈ: ಐಪಿಎಲ್​ ಆಟಗಾರರ ಹರಾಜಿನಲ್ಲಿದ್ದ ಕರ್ನಾಟಕದ 14 ಆಟಗಾರರಲ್ಲಿ ಇಬ್ಬರಷ್ಟೇ ಬಿಕರಿಯಾದರು. ಸ್ಪಿನ್ನರ್​ ಶ್ರೇಯಸ್​ ಗೋಪಾಲ್​ 20 ಲಕ್ಷ ರೂ. ಮೂಲಬೆಲೆಗೆ ಮುಂಬೈ ಸೇರಿದರು.

ರಾಜ್ಯದ ಅನುಭವಿ ಬ್ಯಾಟರ್​ಗಳಾದ ಮನೀಷ್​ ಪಾಂಡೆ, ಕರುಣ್​ ನಾಯರ್​ರನ್ನು ಮೊದಲ ಸುತ್ತಿನಲ್ಲಿ ಖರೀದಿಸಲು ಯಾವುದೇ ತಂಡ ಆಸಕ್ತಿ ತೋರಲಿಲ್ಲ. 2ನೇ ಸುತ್ತಿನಲ್ಲಿ ಮನೀಷ್​ ಪಾಂಡೆ 50 ಲಕ್ಷ ರೂ. ಮೂಲಬೆಲೆಗೆ ಕೆಕೆಆರ್​ ತಂಡ ಸೇರಿದರು. ಕರುಣ್​ 2ನೇ ಸುತ್ತಿನಲ್ಲೂ ಸೇಲಾಗಲಿಲ್ಲ. 2014ರಿಂದ 2017ರವರೆಗೆ ಕೆಕೆಆರ್​ನಲ್ಲೇ ಇದ್ದ ಮನೀಷ್​, 6 ವರ್ಷಗಳ ಬಳಿಕ ತಂಡಕ್ಕೆ ಮರಳಿದರು.

ಮಹಾರಾಜ ಟ್ರೋಫಿಯಲ್ಲಿ ಮಿಂಚಿದ್ದ ವೇಗಿ ಅಭಿಲಾಷ್​ ಶೆಟ್ಟಿ ಕೊನೇ ಸುತ್ತಿನಲ್ಲಿ ಹರಾಜಿನಲ್ಲಿ ಕಾಣಿಸಿಕೊಂಡರೂ ಅವರನ್ನು ಖರೀದಿಸಲು ಯಾವುದೇ ತಂಡ ಆಸಕ್ತಿ ತೋರಲಿಲ್ಲ.

*ಸೇಲಾಗದ ಪ್ರಮುಖರು

ಸ್ಟೀವನ್​ ಸ್ಮಿತ್​, ವಾನ್​ ಡರ್​ ಡುಸೆನ್​, ಜೋಶ್​ ಇಂಗ್ಲಿಸ್​, ಜೋಶ್​ ಹ್ಯಾಸಲ್​ವುಡ್​, ಇಶ್​ ಸೋಧಿ, ತಬರೇಜ್​ ಶಮ್ಸಿ, ಮ್ಯಾಟ್​ ಹೆನ್ರಿ, ಸರ್ಫ್ರಜ್​​ ಖಾನ್​, ಕರುಣ್​ ನಾಯರ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net