

ಬೆಂಗಳೂರು: ಉಗಾಂಡದ ಕಂಪಾಲದಲ್ಲಿ ನಡೆದ ಉಗಾಂಡ ಪ್ಯಾರಾ ಬ್ಯಾಡ್ಮಿಂಟನ್ ಟೂರ್ನ್ಮೆಂಟ್ನಲ್ಲಿ ಕರ್ನಾಟಕ ಪ್ಯಾರಾ ಬ್ಯಾಡ್ಮಿಂಟನ್ ತಂಡ 8 ಪದಕಗಳನ್ನು ಗಳಿಸಿದೆ.
ಸೆ. 13ರಿಂದ 18ರ ವರೆಗೆ ನಡೆದ ಈ ಬ್ಯಾಡ್ಮಿಂಟನ್ ಟೂರ್ನ್ಮೆಂಟ್ನಲ್ಲಿ ಕರ್ನಾಟಕ ಬ್ಯಾಡ್ಮಿಂಟನ್ ತಂಡ 3 ಚಿನ್ನ ಹಾಗೂ 5 ಕಂಚಿನ ಪದಕಗಳನ್ನು ಗೆದ್ದುಕೊಂಡಿದೆ.
ಕರ್ನಾಟಕ ತಂಡದ ಸದಸ್ಯರಾದ ಅಮ್ಮು ಮೋಹನ್, ಮಂಜುನಾಥ್ ಚಿಕ್ಕಯ್ಯ, ಗೌತಮ್, ಶರಣಪ್ಪ ಮತ್ತು ಜಮ್ಷದ್ ಈ ಪದಕಗಳನ್ನು ಗಳಿಸಿದ್ದಾರೆ ಎಂಬುದಾಗಿ ಕರ್ನಾಟಕ ಪ್ಯಾರಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಕಾರ್ಯದರ್ಶಿ ಕೆ.ವೈ. ವೆಂಕಟೇಶ್ ತಿಳಿಸಿದ್ದಾರೆ.