ವಿಜಯ್​ ಹಜಾರೆ ಟ್ರೋಫಿಯಲ್ಲಿ ಕರ್ನಾಟಕಕ್ಕೆ ಮೊದಲ ಸೋಲು

kar web
Published on

ಅಹಮದಾಬಾದ್​: ಬ್ಯಾಟರ್​ ದೇವದತ್​ ಪಡಿಕಲ್​ ಹಾಗೂ ವೇಗಿ ವಿದ್ವತ್​ ಕಾವೇರಪ್ಪ ಗೈರಿನಲ್ಲಿ ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲಿ ವೈಲ್ಯ ಅನುಭವಿಸಿದ ಕರ್ನಾಟಕ ತಂಡ ದೇಶೀಯ ಏಕದಿನ ಟೂರ್ನಿ ವಿಜಯ್​ ಹಜಾರೆ ಟ್ರೋಫಿಯಲ್ಲಿ ಹರಿಯಾಣ ಎದುರು 5 ವಿಕೆಟ್​ಗಳಿಂದ ಪರಾಭವಗೊಂಡಿದೆ. ಟೂರ್ನಿಯಲ್ಲಿ ಮೊದಲ ಸೋಲುಂಡ ಮಯಾಂಕ್​ ಅಗರ್ವಾಲ್​ ಬಳಗ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿ ಉಳಿದಿದ್ದು, ನಾಕೌಟ್​ ಹಂತಕ್ಕೇರುವ ಆಸೆಯೂ ಜೀವಂತವಿದೆ. ಕರ್ನಾಟಕದ ಅಜೇಯ ಓಟಕ್ಕೆ ಬ್ರೇಕ್​ ಹಾಕಿದ ಹರಿಯಾಣ ಸತತ 6ನೇ ಗೆಲುವಿನೊಂದಿಗೆ ಕ್ವಾರ್ಟರ್​ಫೈನಲ್​ ಸ್ಥಾನ ಖಚಿತಪಡಿಸಿಕೊಂಡಿದೆ.

ಭಾನುವಾರ ನಡೆದ ಸಿ ಗುಂಪಿನ ತನ್ನ 6ನೇ ಲೀಗ್​ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ಗೆ ಇಳಿದ ಕರ್ನಾಟಕಕ್ಕೆ ಅಗ್ರ ಕ್ರಮಾಂಕದ ಬ್ಯಾಟರ್​ಗಳು ಕೈಕೊಟ್ಟರು. ಬಳಿಕ ಬಾಲಂಗೋಚಿ ವೈಶಾಕ್​ ವಿಜಯ್​ ಕುಮಾರ್​ (54 ರನ್​, 61 ಎಸೆತ, 4 ಬೌಂಡರಿ, 4 ಸಿಕ್ಸರ್​) ಅರ್ಧಶತಕದ ಹೋರಾಟದ ನಡುವೆ 43.5 ಓವರ್​ಗಳಲ್ಲಿ 143 ರನ್​ಗಳಿಗೆ ಆಲೌಟ್​ ಆಯಿತು. ಸಾಧಾರಣ ಮೊತ್ತ ಬೆನ್ನಟ್ಟಿದ್ದ ಹರಿಯಾಣ, ವಿಕೆಟ್​ ಕೀಪರ್​&ಬ್ಯಾಟರ್​ ರೋಹಿತ್​ ಶರ್ಮ (63 ರನ್​, 70 ಎಸೆತ, 7 ಬೌಂಡರಿ, 1 ಸಿಕ್ಸರ್​) ಅರ್ಧಶತಕದ ನೆರವಿನಿಂದ 31.1 ಓವರ್​ಗಳಲ್ಲಿ 5 ವಿಕೆಟ್​ಗೆ 144 ರನ್​ಗಳಿಸಿ ಸುಲಭ ಗೆಲುವು ದಾಖಲಿಸಿತು.

ದಣ ಆಫ್ರಿಕಾ ಪ್ರವಾಸಕ್ಕೆ ಭಾರತ ಎ ತಂಡಕ್ಕೆ ಆಯ್ಕೆಯಾಗಿರುವ ದೇವದತ್​ ಪಡಿಕಲ್​, ವಿದ್ವತ್​ ಕಾವೇರಪ್ಪ ಟೂರ್ನಿಯ ಇತರ ಪಂದ್ಯಗಳಿಗೆ ಕರ್ನಾಟಕ ತಂಡಕ್ಕೆ ಅಲಭ್ಯರಾಗಿದ್ದಾರೆ.

ಕರ್ನಾಟಕ: 43.5 ಓವರ್​ಗಳಲ್ಲಿ 143 (ಮಯಾಂಕ್​ 0, ಸಮರ್ಥ್​ 1, ಬಿಆರ್​ ಶರತ್​ 15, ಮನೀಷ್​ 24, ಜೆ. ಸುಚಿತ್​ 12, ವೈಶಾಕ್​ 54, ಸುಮಿತ್​ 28ಕ್ಕೆ3, ಚಾಹಲ್​ 16ಕ್ಕೆ 2). ಹರಿಯಾಣ: 31.1 ಓವರ್​ಗಳಲ್ಲಿ 144 (ಯುವರಾಜ್​ 19, ನಿಶಾಂತ್​ 43, ರೋಹಿತ್​ 63, ವಿ.ಕೌಶಿಕ್​ 9ಕ್ಕೆ2, ಜೆ. ಸುಚಿತ್​ 37ಕ್ಕೆ 2).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net