

ಅಹಮದಾಬಾದ್: ಮೊದಲಾರ್ಧದ ಮುನ್ನಡೆಯನ್ನು ಬಿಟ್ಟುಕೊಟ್ಟ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿಯಲ್ಲಿ ಸೋಲಿನ ಆರಂಭ ಕಂಡಿದೆ. ಟ್ರಾನ್ಸ್ಸ್ಟೇಡಿಯಾದಲ್ಲಿ ಭಾನುವಾರ ಟೂರ್ನಿಯ ಮೊದಲ ಪಂದ್ಯ ಆಡಿದ ಬೆಂಗಳೂರು ಬುಲ್ಸ್ ತಂಡ ಆತಿಥೇಯ ಗುಜರಾತ್ ಜೈಂಟ್ಸ್ ಎದುರು 31-34 ಅಂತರದಿಂದ ವೀರೋಚಿತ ಸೋಲು ಅನುಭವಿಸಿತು.
ಮೊದಲಾರ್ಧದಲ್ಲಿ 20&14ರಿಂದ ಮುನ್ನಡೆ ಸಾಧಿಸಿದ್ದ ಬುಲ್ಸ್, ದ್ವೀತಿಯಾರ್ಧದಲ್ಲಿ ಆಲೌಟ್ ಬಲೆಗೆ ಬಿದ್ದು ಹಿನ್ನಡೆ ಕಂಡಿತು. ಪಂದ್ಯ ಮುಕ್ತಾಯಕ್ಕೆ 3 ನಿಮಿಷಗಳಿರುವಾಗ ಮತ್ತೆ ಮುನ್ನಡೆ ಸಾಧಿಸಿದರೂ, ಬುಲ್ಸ್ ಅದನ್ನು ಉಳಿಸಿಕೊಳ್ಳಲು ಶಕ್ತವಾಗಲಿಲ್ಲ. ಬುಲ್ಸ್ ಪರ ರೈಡರ್ಗಳಾದ ಭರತ್ 7, ವಿಕಾಸ್ ಕಂಡೋಲ 6, ನೀರಜ್ ನರ್ವಾಲ್ 4 ಅಂಕ ಗಳಿಸಿದರು.
ತಲೈವಾಸ್ಗೆ ಜಯ: ರೈಡರ್ ಅಜಿಂಕ್ಯ ಪವಾರ್ (21 ಅಂಕ) ಭರ್ಜರಿ ನಿರ್ವಹಣೆಯ ಬಲದಿಂದ ತಮಿಳ್ ತಲೈವಾಸ್ ತಂಡ ದಿನದ ಮೊದಲ ಪಂದ್ಯದಲ್ಲಿ ದಬಾಂಗ್ ದೆಹಲಿ ವಿರುದ್ಧ 42&31 ಅಂತರದಿಂದ ಗೆಲುವು ದಾಖಲಿಸಿತು. ತಲೈವಾಸ್ ಮೊದಲಾರ್ಧದಲ್ಲೇ 18-14ರಿಂದ ಮುನ್ನಡೆ ಸಾಧಿಸಿತ್ತು. ಅಜಿಂಕ್ಯ 14 ಯಶಸ್ವಿ ರೈಡಿಂಗ್ಗಳೊಂದಿಗೆ ಮಿಂಚಿದರು. ದೆಹಲಿ ಪರ ನಾಯಕ ನವೀನ್ ಕುಮಾರ್ (14) ಹೋರಾಟ ವ್ಯರ್ಥವೆನಿಸಿತು.