ವಿಜಯ್ ಹಜಾರೆ ಟ್ರೋಫಿ ಕ್ವಾರ್ಟರ್​ಫೈನಲ್‌ನಲ್ಲಿ ಕರ್ನಾಟಕಕ್ಕೆ ಕೇರಳ ಎದುರಾಳಿ

karnataka web
Published on

ಬೆಂಗಳೂರು: ಹಾಲಿ ಚಾಂಪಿಯನ್ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ದೇಶೀಯ ಏಕದಿನ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್​ಫೈನಲ್‌ನಲ್ಲಿ ಕೇರಳ ತಂಡವನ್ನು ಎದುರಿಸಲಿದೆ. ಮಾರ್ಚ್ 8ರಂದು ದೆಹಲಿಯ ಪಾಲಂನ ಏರ್​ಫೋರ್ಸ್ ಕಾಂಪ್ಲೆಕ್ಸ್ ಗ್ರೌಂಡ್‌ನಲ್ಲಿ ಈ ಪಂದ್ಯ ನಡೆಯಲಿದೆ. ಮಾರ್ಚ್ 7ರಂದು ದೆಹಲಿ-ಉತ್ತರಾಖಂಡ ನಡುವೆ ನಡೆಯಲಿರುವ ಪ್ರಿ ಕ್ವಾರ್ಟರ್​ಫೈನಲ್ ಪಂದ್ಯದೊಂದಿಗೆ ಟೂರ್ನಿಯ ನಾಕೌಟ್ ಪಂದ್ಯಗಳಿಗೆ ದೆಹಲಿಯಲ್ಲಿ ಚಾಲನೆ ಸಿಗಲಿವೆ.

ಟೂರ್ನಿಯ ಮೊದಲ ಪಂದ್ಯದಲ್ಲಿ ಉತ್ತರ ಪ್ರದೇಶ ವಿರುದ್ಧ ಸೋತರೂ ಬಳಿಕ ಬಲಿಷ್ಠ ನಿರ್ವಹಣೆ ತೋರುವ ಮೂಲಕ ಸತತ 4 ಪಂದ್ಯ ಗೆದ್ದು ಎಂಟರ ಘಟ್ಟಕ್ಕೇರಿರುವ ಕರ್ನಾಟಕ ತಂಡ, ಸಿ ಗುಂಪಿನಲ್ಲಿ ತನ್ನ ಜತೆಗಿದ್ದ ಕೇರಳ ವಿರುದ್ಧ ಲೀಗ್ ಹಂತದ ಮುಖಾಮುಖಿಯಲ್ಲಿ ಜಯಿಸಿತ್ತು. ಇದೀಗ ಮನೀಷ್ ಪಾಂಡೆ ಮತ್ತು ಕೆ. ಗೌತಮ್ ಸೇರ್ಪಡೆಯಿಂದ ನಾಕೌಟ್ ಹಂತದಲ್ಲಿ ಆರ್. ಸಮರ್ಥ್ ಸಾರಥ್ಯದ ಕರ್ನಾಟಕ ತಂಡದ ಬಲ ಮತ್ತಷ್ಟು ಹೆಚ್ಚಿದೆ.

ನಾಕೌಟ್ ವೇಳಾಪಟ್ಟಿ: ಪ್ರಿ-ಕ್ವಾರ್ಟರ್​ಫೈನಲ್: ಮಾರ್ಚ್ 7: ದೆಹಲಿ-ಉತ್ತರಾಖಂಡ; ಕ್ವಾರ್ಟರ್​ಫೈನಲ್ಸ್: ಮಾರ್ಚ್ 8: ಗುಜರಾತ್-ಆಂಧ್ರ; ಕರ್ನಾಟಕ-ಕೇರಳ; ಮಾರ್ಚ್ 9: ಮುಂಬೈ-ಸೌರಾಷ್ಟ್ರ; ಉತ್ತರ ಪ್ರದೇಶ-ಪ್ರಿ ಕ್ವಾರ್ಟರ್​ಫೈನಲ್​ ವಿಜೇತರು; ಮಾರ್ಚ್ 11: ಸೆಮಿಫೈನಲ್ಸ್; ಮಾರ್ಚ್ 14: ಫೈನಲ್; ಎಲ್ಲ ಪಂದ್ಯ ಆರಂಭ: ಬೆಳಗ್ಗೆ 9.00.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net