ಈ ಬಾರಿ ಐಪಿಎಲ್​ ಹರಾಜಿನಲ್ಲಿ ಅದೃಷ್ಟ ಪರೀಕ್ಷಿಸಲಿದ್ದಾರೆ ಕರ್ನಾಟಕದ 14 ಕ್ರಿಕೆಟಿಗರು!

ipl 17 web
Published on

ಬೆಂಗಳೂರು: ಡಿಸೆಂಬರ್​ 19ರಂದು ದುಬೈನಲ್ಲಿ ನಡೆಯಲಿರುವ ಐಪಿಎಲ್​ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಕರ್ನಾಟಕದ ಒಟ್ಟು 14 ಆಟಗಾರರು ಅದೃಷ್ಟ ಪರೀಸಲಿದ್ದಾರೆ. ಟೀಮ್​ ಇಂಡಿಯಾ ಪರ ಆಡಿರುವ ರಾಜ್ಯದ ಬ್ಯಾಟರ್​ಗಳಾದ ಮನೀಷ್​ ಪಾಂಡೆ ಮತ್ತು ಕರುಣ್​ ನಾಯರ್​ ತಲಾ 50 ಲಕ್ಷ ರೂ. ಮೂಲಬೆಲೆ ಹೊಂದಿದ್ದಾರೆ. ರಾಜ್ಯದ ಉಳಿದ 12 ಆಟಗಾರರು ತಲಾ 20 ಲಕ್ಷ ರೂ. ಮೂಲಬೆಲೆಯೊಂದಿಗೆ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಹಾಲಿ ದೇಶೀಯ ಕ್ರಿಕೆಟ್​ ಋತುವಿನಲ್ಲಿ ವಿದರ್ಭಕ್ಕೆ ವಲಸೆ ಹೋಗಿರುವ ಕರುಣ್​ ನಾಯರ್​, ವಿಸಿಎ ಕಡೆಯಿಂದ ಹರಾಜಿಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದೇ ರೀತಿ ಕೇರಳಕ್ಕೆ ವಲಸೆ ಹೋಗಿರುವ ಸ್ಪಿನ್ನರ್​ ಶ್ರೇಯಸ್​ ಗೋಪಾಲ್​ ಮತ್ತು ಮಿಜೋರಾಂಗೆ ವಲಸೆ ಹೋಗಿರುವ ಕೆಸಿ ಕಾರ್ಯಪ್ಪ ಕೂಡ ಹರಾಜಿನಲ್ಲಿದ್ದಾರೆ. ಇನ್ನುಳಿದಂತೆ ರಾಜ್ಯ ತಂಡದ ಜೆ. ಸುಚಿತ್​, ಶುಭಾಂಗ್​ ಹೆಗ್ಡೆ, ನಿಹಾಲ್​ ಉಲ್ಲಾಳ್​, ಬಿಆರ್​ ಶರತ್​ ಜತೆಗೆ ಮಹಾರಾಜ ಟ್ರೋಫಿಯಲ್ಲಿ ಮಿಂಚಿರುವ ಮನ್ವಂತ್​ ಕುಮಾರ್​, ಎಲ್​ಆರ್​ ಚೇತನ್​, ಕೆಎಲ್​ ಶ್ರೀಜಿತ್​, ಎಂ. ವೆಂಕಟೇಶ್​, ಮೋನಿಶ್​ ರೆಡ್ಡಿ, ಅಭಿಲಾಷ್​ ಶೆಟ್ಟಿ ಹರಾಜಿನಲ್ಲಿದ್ದಾರೆ.

ಉಳಿದಂತೆ ಸದ್ಯ ರಾಜ್ಯದ 10 ಕ್ರಿಕೆಟಿಗರು ವಿವಿಧ ತಂಡಗಳಲ್ಲಿ ರಿಟೇನ್​ ಆಗಿದ್ದಾರೆ. ಅವರೆಂದರೆ ಕೆಎಲ್​ ರಾಹುಲ್​, ಕೆ. ಗೌತಮ್​ (ಲಖನೌ), ದೇವದತ್​ ಪಡಿಕಲ್​ (ರಾಜಸ್ಥಾನದಿಂದ ಲಖನೌಗೆ ವರ್ಗಾವಣೆ), ಮಯಾಂಕ್​ ಅಗರ್ವಾಲ್​ (ಸನ್​ರೈಸರ್ಸ್​), ಪ್ರಸಿದ್ಧಕೃಷ್ಣ (ರಾಜಸ್ಥಾನ), ಪ್ರವಿಣ್​ ದುಬೆ (ಡೆಲ್ಲಿ), ಅಭಿನವ್​ ಮನೋಹರ್​ (ಗುಜರಾತ್​), ವಿದ್ವತ್​ ಕಾವೇರಪ್ಪ (ಪಂಜಾಬ್​ ಕಿಂಗ್ಸ್​), ವೈಶಾಕ್​ ವಿಜಯ್​ಕುಮಾರ್​, ಮನೋಜ್​ ಭಾಂಡಗೆ (ಆರ್​ಸಿಬಿ).

ಮೊಹಮದ್​ ನಬಿ ಅತಿ ಹಿರಿಯ ಆಟಗಾರ

ಐಪಿಎಲ್​-17ರ ಹರಾಜಿನಲ್ಲಿ ಪಾಲ್ಗೊಳ್ಳಲಿರುವ ಒಟ್ಟು 333 ಕ್ರಿಕೆಟಿಗರಲ್ಲಿ ಅ್ಘಾನಿಸ್ತಾನದ ಮಾಜಿ ನಾಯಕ 39 ವರ್ಷದ ಮೊಹಮದ್​ ನಬಿ ಅತ್ಯಂತ ಹಿರಿಯರೆನಿಸಿದ್ದಾರೆ. ದಣ ಆಫ್ರಿಕಾದ 17 ವರ್ಷದ ಎಡಗೈ ವೇಗಿ ಕ್ವೆನಾ ಮಕ ಅತಿ ಕಿರಿಯರೆನಿಸಿದ್ದಾರೆ. ಭಾರತದ 214 ಆಟಗಾರರ ಜತೆಗೆ ಇಂಗ್ಲೆಂಡ್​ನಿಂದ ಗರಿಷ್ಠ 25 ಆಟಗಾರರು ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ. ಆಸ್ಟ್ರೆಲಿಯಾದ 21 ಮತ್ತು ದಣ ಆಫ್ರಿಕಾದ 18 ಆಟಗಾರರು ಕಣದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net