More

    ಐಪಿಎಲ್ ಹರಾಜಿನಲ್ಲಿ 333 ಕ್ರಿಕೆಟಿಗರು: 214 ಭಾರತೀಯರು, 119 ವಿದೇಶೀಯರು, 23 ಆಟಗಾರರಿಗೆ ₹2 ಕೋಟಿ ಮೂಲಬೆಲೆ

    ಬೆಂಗಳೂರು: ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲಿರುವ ಐಪಿಎಲ್ 17ನೇ ಆವೃತ್ತಿಯ ಹರಾಜು ಪ್ರಕ್ರಿಯೆಯಲ್ಲಿ 214 ಭಾರತೀಯರು ಮತ್ತು 119 ವಿದೇಶಿಯರು ಸೇರಿ ಒಟ್ಟು 333 ಕ್ರಿಕೆಟಿಗರು ಭಾಗವಹಿಸಲಿದ್ದಾರೆ.ಎಲ್ಲ 10 ತಂಡಗಳು ಒಟ್ಟಾರೆ ಗರಿಷ್ಠ 77 ಆಟಗಾರರನ್ನು ಖರೀದಿಸಲು ಅವಕಾಶವಿದೆ. 10 ತಂಡಗಳು ಒಟ್ಟು 262.95 ಕೋಟಿ ರೂ. ಬಜೆಟ್ ಹೊಂದಿವೆ.

    10 ತಂಡಗಳು ಈಗಾಗಲೆ 50 ವಿದೇಶೀಯರ ಸಹಿತ 223 ಆಟಗಾರರನ್ನು ರಿಟೇನ್ ಮಾಡಿಕೊಂಡಿದ್ದು, ಹರಾಜಿನಲ್ಲಿ 30 ವಿದೇಶಿಯರ ಸಹಿತ ಗರಿಷ್ಠ 77 ಆಟಗಾರರನ್ನು ಖರೀದಿಸಲು ಅವಕಾಶವಿದೆ. ಏಕದಿನ ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ ತಂಡದ ತಾರೆಯರಾದ ಟ್ರಾವಿಸ್ ಹೆಡ್, ನಾಯಕ ಪ್ಯಾಟ್ ಕಮ್ಮಿನ್ಸ್ ಮತ್ತು ಹ್ಯಾರಿ ಬ್ರೂಕ್ ₹2 ಕೋಟಿ ಮೂಲಬೆಲೆ ಹೊಂದಿದ್ದಾರೆ. 13 ಆಟಗಾರರು 1.5 ಕೋಟಿ ರೂ. ಮೂಲಬೆಲೆ ಹೊಂದಿದ್ದಾರೆ. ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ಪರ ಮಿಂಚಿದ ಬೆಂಗಳೂರು ಮೂಲದ ಯುವ ಆಲ್ರೌಂಡರ್ ರಚಿನ್ ರವೀಂದ್ರ 50 ಲಕ್ಷ ರೂ. ಮೂಲಬೆಲೆಯೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಡೆಲ್ಲಿ ತಂಡದಿಂದ ರಿಲೀಸ್ ಆಗಿರುವ ಕನ್ನಡಿಗ ಮನೀಷ್ ಪಾಂಡೆ ಹಾಗೂ ಕರುಣ್ ನಾಯರ್ 50 ಲಕ್ಷ ರೂ. ಮೂಲಬೆಲೆಯೊಂದಿಗೆ ಅದೃಷ್ಟ ಪರೀಕ್ಷಿಸಲಿದ್ದಾರೆ.

    ₹2 ಕೋಟಿ ಮೂಲಬೆಲೆ
    ಹರ್ಷಲ್ ಪಟೇಲ್, ಕೇದಾರ್ ಜಾಧವ್, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್ (ಭಾರತ), ಪ್ಯಾಟ್ ಕಮ್ಮಿನ್ಸ್, ಟ್ರಾವಿಸ್ ಹೆಡ್, ಸ್ಟೀವನ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಸಲ್‌ವುಡ್, ಸೀನ್ ಅಬೋಟ್, ಜೋಶ್ ಇಂಗ್ಲಿಸ್ (ಆಸ್ಟ್ರೇಲಿಯಾ), ಹ್ಯಾರಿ ಬ್ರೂಕ್, ಬೆನ್ ಡಕೆಟ್, ಆದಿಲ್ ರಶೀದ್, ಡೇವಿಡ್ ವಿಲ್ಲಿ, ಕ್ರಿಸ್ ವೋಕ್ಸ್, ಜೇಮಿ ಓವರ್‌ಟನ್, ಟಾಮ್ ಬ್ಯಾಂಟನ್ (ಇಂಗ್ಲೆಂಡ್), ರಿಲೀ ರೋಸೌ, ವಾನ್ ಡರ್ ಡುಸೆನ್, ಗೆರಾಲ್ಡ್ ಕೋಟ್‌ಜೀ (ದಕ್ಷಿಣ ಆಫ್ರಿಕಾ), ಲಾಕಿ ರ್ಗ್ಯುಸನ್ (ನ್ಯೂಜಿಲೆಂಡ್), ಮುಜೀಬ್ ಉರ್ ರೆಹಮಾನ್ (ಅ್ಘಾನಿಸ್ತಾನ), ಏಂಜೆಲೊ ಮ್ಯಾಥ್ಯೂಸ್ (ಶ್ರೀಲಂಕಾ), ಮುಸ್ತಾಫಿಜುರ್ ರೆಹಮಾನ್ (ಬಾಂಗ್ಲಾದೇಶ).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts