ದಿಗ್ಗಜ ಕಪಿಲ್ ದೇವ್ ಅವರ ಅತ್ಯುತ್ತಮ ಏಕದಿನ ತಂಡ ಹೀಗಿದೆ..!

kapil dev for web
Published on

ಬೆಂಗಳೂರು: ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ಭಾರತದ ಅತ್ಯುತ್ತಮ ಏಕದಿನ ತಂಡ ಆಯ್ಕೆ ಮಾಡಿದ್ದಾರೆ. ದಿಗ್ಗಜ ಸಚಿನ್ ತೆಂಡುಲ್ಕರ್ ಹಾಗೂ ವೀರೇಂದ್ರ ಸೆಹ್ವಾಗ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಆಗಿದ್ದಾರೆ. ಬಾಲಿವುಡ್ ನಟಿ ನೇಹಾ ದೂಪಿಯಾ ಅವರ ‘ನೋ ಫಿಲ್ಟರ್ ವಿತ್ ನೇಹಾ’ ಕಾರ್ಯಕ್ರಮದಲ್ಲಿ ಕಪಿಲ್ ದೇವ್ ತಮ್ಮ ಫೇವರಿಟ್ ಆಟಗಾರರನ್ನು ಹೆಸರಿಸಿದ್ದಾರೆ.

ಸಚಿನ್-ಸೆಹ್ವಾಗ್ ಆರಂಭಿಕ ಬ್ಯಾಟ್ಸ್‌ಮನ್ ಆಗಿದ್ದರೆ, ಹಾಲಿ ನಾಯಕ ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿದ್ದಾರೆ. ಬಳಿಕ ರಾಹುಲ್ ದ್ರಾವಿಡ್ ಹಾಗೂ ಯುವರಾಜ್ ಸಿಂಗ್ ನಂತರದ ಕ್ರಮಾಂಕದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ವಿಕೆಟ್ ಕೀಪಿಂಗ್ ಸ್ಥಾನಕ್ಕೆ ಎಂಎಸ್ ಧೋನಿ ಬಿಟ್ಟರೆ ಯಾರ ಆಯ್ಕೆ ಇಲ್ಲ ಎಂದಿದ್ದಾರೆ. 1990ರ ದಶಕದಲ್ಲಿ ತಮ್ಮ ಜತೆ ಚೆಂಡು ಹಂಚಿಕೊಂಡಿದ್ದ ಕನ್ನಡಿಗ ಜಾವಗಲ್ ಶ್ರೀನಾಥ್ ವೇಗದ ಬೌಲಿಂಗ್ ವಿಭಾಗದಲ್ಲಿದ್ದರೆ, ಜಹೀರ್ ಖಾನ್, ಜಸ್‌ಪ್ರೀತ್ ಬುಮ್ರಾ ಸ್ಥಾನ ಪಡೆದಿದ್ದಾರೆ. ಸ್ಪಿನ್ ವಿಭಾಗದಲ್ಲಿ ಅನಿಲ್ ಕುಂಬ್ಳೆ ಹಾಗೂ ಹರ್ಭಜನ್ ಸಿಂಗ್ ಚೆಂಡು ಹಂಚಿಕೊಂಡಿದ್ದಾರೆ.

ಕಪಿಲ್ ದೇವ್ ಫೇವರಿಟ್ ಏಕದಿನ ತಂಡ: ಸಚಿನ್ ತೆಂಡುಲ್ಕರ್, ವೀರೇಂದ್ರ ಸೆಹ್ವಾಗ್, ವಿರಾಟ್ ಕೊಹ್ಲಿ, ರಾಹುಲ್ ದ್ರಾವಿಡ್, ಯುವರಾಜ್ ಸಿಂಗ್, ಎಂಎಸ್ ಧೋನಿ, ಜಾವಗಲ್ ಶ್ರೀನಾಥ್, ಹರ್ಭಜನ್ ಸಿಂಗ್, ಅನಿಲ್ ಕುಂಬ್ಳೆ, ಜಹೀರ್ ಖಾನ್, ಜಸ್‌ಪ್ರೀತ್ ಬುಮ್ರಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net