More

    VIDEO: ಟೀಂ ಇಂಡಿಯಾ ಆಲ್ರೌಂಡರ್ ರವೀಂದ್ರ ಜಡೇಜಾ ಫಿಟ್ನೆಸ್ ಸ್ಟೋರಿ..!

    ಸಿಡ್ನಿ: ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಟೀಮ್ ಇಂಡಿಯಾ ಸನ್ನದ್ಧವಾಗುತ್ತಿದೆ. ಶುಕ್ರವಾರ (ನ.27) ಮೊದಲ ಏಕದಿನ ಪಂದ್ಯ ನಡೆಯಲಿದೆ. ಇದಕ್ಕಾಗಿ ಟೀಮ್ ಇಂಡಿಯಾ ಆಟಗಾರರು ಕೂಡ ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ. ಅದರಲ್ಲೂ ಆಲ್ರೌಂಡರ್ ರವೀಂದ್ರ ಜಡೇಜಾ ಮಳೆ, ಬಿಸಿಲು ಲೆಕ್ಕಿಸದೆ ದೈಹಿಕ ಕಸರತ್ತು ಮಾಡುತ್ತಿದ್ದಾರೆ. ಫಿಟ್ನೆಸ್‌ಗಾಗಿ ವಿಶೇಷ ಒತ್ತು ನೀಡುವ ಜಡೇಜಾ ಮಾಡುತ್ತಿರುವ ಕೆಲವೊಂದು ಕಸರತ್ತಿನ ವಿಡಿಯೋವನ್ನು ಬಿಸಿಸಿಐ ಟ್ವಿಟರ್‌ನಲ್ಲಿ ಪ್ರಕಟಿಸಲಾಗಿದೆ. ಶ್ರೇಷ್ಠ ಆಲ್ರೌಂಡರ್‌ಗಳಲ್ಲಿ ಒಬ್ಬರಾಗಿರುವ ಜಡೇಜಾ, ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಪ್ರಮುಖ ಪಾತ್ರವಹಿಸಬೇಕಿದೆ. ರಾಕೆಟ್ ಆರ್ಮ್ ಥ್ರೋಗಳನ್ನು ಎಸೆಯುವ ಮೂಲಕ ಭರ್ಜರಿ ಸಿದ್ಧತೆ ಕೈಗೊಳ್ಳುತ್ತಿದ್ದಾರೆ.

    ಬಹುನಿರೀಕ್ಷಿತ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ರವೀಂದ್ರ ಜಡೇಜಾ ಭರ್ಜರಿ ಸಿದ್ಧತೆ ಕೈಗೊಳ್ಳುತ್ತಿದ್ದಾರೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಟ್ವಿಟರ್‌ನಲ್ಲಿ ಜಡೇಜಾ ಮಾಡುತ್ತಿರುವ ವಿಡಿಯೋವನ್ನು ಪ್ರಕಟಿಸಿದೆ. ಸಿಡ್ನಿಯಲ್ಲಿ ಬಿಡುಬಿಟ್ಟಿರುವ ಭಾರತ ತಂಡ ಕ್ವಾರಂಟೈನ್ ಅವಧಿಯಲ್ಲೇ ಅಭ್ಯಾಸ ಕೈಗೊಂಡಿದೆ. ಆಟಗಾರರು ಜಿಮ್‌ನಲ್ಲಿ ಮಾಡುತ್ತಿದ್ದ ದೈಹಿಕ ಕಸರತ್ತಿನ ವಿಡಿಯೋಗಳನ್ನು ಈ ಮೊದಲು ಬಿಸಿಸಿಐ ಪ್ರಕಟಿಸಿತ್ತು. ‘ಮಳೆಯೇ ಇರಲಿ, ಬಿಸಿಲೇ ಇರಲಿ, ತಳ್ಳುವುದನ್ನು (ದೈಹಿಕ ಕಸರತ್ತಿನ ಪರಿಕರ) ನಿಲ್ಲಿಸುವುದಿಲ್ಲ’ ಎಂದು ಬರೆಯಲಾಗಿದೆ.

    ಆಲ್ರೌಂಡರ್ ಜಡೇಜಾ ಸರಣಿ ಮೂರು ಮಾದರಿಯಲ್ಲೂ ಸ್ಥಾನ ಪಡೆದಿದ್ದಾರೆ. ಐಪಿಎಲ್‌ನಲ್ಲಿ ಸಿಎಸ್‌ಕೆ ತಂಡದಲ್ಲಿದ್ದ ಜಡೇಜಾ ನೀರಸ ನಿರ್ವಹಣೆ ತೋರಿದ್ದರು. ವಿರಾಟ್ ಕೊಹ್ಲಿ ಸಾರಥ್ಯದ ಭಾರತ ತಂಡ ಎರಡು ವರ್ಷಗಳ ಹಿಂದೆ ಆಸ್ಟ್ರೇಲಿಯಾ ನೆಲದಲ್ಲಿ ಜಯ ದಾಖಲಿಸಿ ಐತಿಹಾಸಿಕ ಸಾಧನೆ ಮೆರೆದಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts