

ಮುಂಬೈ: ಕೇರಳದ ಯುವ ಆ್ ಸ್ಪಿನ್ನರ್ ಮಿನ್ನು ಮಣಿ ಆಗಸ್ಟ್ 7ರಿಂದ ನಡೆಯಲಿರುವ ಆಸ್ಟ್ರೆಲಿಯಾ ಪ್ರವಾಸಕ್ಕೆ ಭಾರತ ಎ ಮಹಿಲಾ ತಂಡದ ನಾಯಕಿನಾಗಿ ನೇಮಕಗೊಂಡಿದ್ದಾರೆ. ಶ್ವೇತಾ ಸೆಹ್ರಾವತ್ ಉಪನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಶುಭಾ ಸತೀಶ್ ತಂಡದಲ್ಲಿರುವ ಏಕೈಕ ಕನ್ನಡತಿಯಾಗಿದ್ದಾರೆ.
ಭಾರತ ತಂಡ ಪ್ರವಾಸದಲ್ಲಿ 3 ಟಿ20, 3 ಏಕದಿನ ಮತ್ತು ಒಂದು ಚತುರ್ದಿನ ಪಂದ್ಯವನ್ನು ಆತಿಥೇ ಆಸ್ಟ್ರೆಲಿಯಾ ಎ ತಂಡದ ವಿರುದ್ಧ ಆಡಲಿದೆ. ಈಗಾಗಲೆ ಭಾರತ ರಾಷ್ಟ್ರೀಯ ತಂಡದ ಪರ ಆಡಿರುವ ಸಜನಾ ಸಜೀವನ್, ಉಮಾ ಛೇಟ್ರಿ ಮತ್ತು ಸೈಕಾ ಇಶಾಕ್ ಕೂಡ ಎ ತಂಡದಲ್ಲಿದ್ದಾರೆ.
ಭಾರತ ಎ ತಂಡ ಆಗಸ್ಟ್ 7, 9, 11ರಂದು ಬ್ರಿಸ್ಬೇನ್ನ ಅಲನ್ ಬಾರ್ಡರ್ ಫೀಲ್ಡ್ನಲ್ಲಿ 3 ಟಿ20 ಪಂದ್ಯಗಳನ್ನು ಆಡಲಿದೆ. ನಂತರ ಆಗಸ್ಟ್ 14, 16, 18ರಂದು 3 ಏಕದಿನ ಪಂದ್ಯಗಳನ್ನು ಮೆಕಾಯ್ನಲ್ಲಿ ಆಡಲಿದೆ. ಆಗಸ್ಟ್ 22ರಿಂದ 25ರವರೆಗೆ ಗೋಲ್ಡ್ಕೋಸ್ಟ್ನಲ್ಲಿ ಚತುರ್ದಿನ ಟೆಸ್ಟ್ ಪಂದ್ಯ ನಡೆಯಲಿದೆ.
ಭಾರತ ಎ ತಂಡ: ಮಿನ್ನು ಮಣಿ (ನಾಯಕ), ಶ್ವೇತಾ ಸೆಹ್ರಾವತ್ (ಉಪನಾಯಕಿ), ಪ್ರಿಯಾ ಪೂನಿಯಾ, ಶುಭಾ ಸತೀಶ್, ತೇಜಲ್ ಹಸಬ್ನಿಸ್, ಕಿರಣ್ ನವಗಿರೆ, ಸಜನಾ ಸಜೀವನ್, ಉಮಾ ಛೇಟ್ರಿ (ವಿ.ಕೀ), ಶಿಪ್ರ ಗಿರಿ (ವಿ.ಕೀ), ರಾವಿ ಬಿಷ್ಟ್, ಸೈಕಾ ಇಶಾಕ್, ಮನ್ನತ್ ಕಶ್ಯಪ್, ತನುಜಾ ತನ್ವರ್, ಪ್ರಿಯಾ ಮಿಶ್ರಾ, ಮೇನಾ ಸಿಂಗ್, ಸಯಾಲಿ ಸತ್ಘರೆ, ಶಭ್ನಾಮ್ ಶಕೀಲ್, ಎಸ್. ಯಶಶ್ರೀ.