

ನವದೆಹಲಿ: ಜುಲೈ 26ರಿಂದ ಆಗಸ್ಟ್ 11ರವರೆಗೆ ಪ್ಯಾರಿಸ್ನಲ್ಲಿ ನಡೆಯಲಿರುವ 33ನೇ ಆವೃತ್ತಿಯ ಒಲಿಂಪಿಕ್ಸ್ ಕ್ರೀಡಾಕೂಟ, ಜಿಯೋಸಿನಿಮಾ ಆ್ಯಪ್ನಲ್ಲಿ ಉಚಿತವಾಗಿ ನೇರಪ್ರಸಾರ ಕಾಣಲಿದೆ. ಪ್ಯಾರಿಸ್ ಒಲಿಂಪಿಕ್ಸ್ಗೆ ವಯಾಕಾಮ್18 ಅಧಿಕೃತ ಪ್ರಸಾರ ಮತ್ತು ಡಿಜಿಟಲ್ ಪಾಲುದಾರನಾಗಿದ್ದು, ಭಾರತದ ಎಲ್ಲ ಸ್ಪರ್ಧೆಗಳನ್ನು ನೇರಪ್ರಸಾರ ಮಾಡಲಿದೆ. ಟಿವಿಯಲ್ಲಿ "ಸ್ಪೋರ್ಟ್ಸ್18' ನೆಟ್ವರ್ಕ್ನಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ನೇರಪ್ರಸಾರ ಕಾಣಲಿದೆ.
ಕ್ರೀಡಾಪ್ರೇಮಿಗಳು ಜಿಯೋಸಿನಿಮಾದಲ್ಲಿ ನಮಗೆ ಬೇಕೆನಿಸಿದ ಕ್ರೀಡಾಸ್ಪರ್ಧೆಗಳನ್ನು ಯಾವುದೇ ಸಮಯದಲ್ಲಿ ವೀಸಬಹುದಾಗಿದೆ. ಇಂಗ್ಲಿಷ್, ಹಿಂದಿ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ವೀಕ್ಷಕವಿವರಣೆಯೂ ಲಭ್ಯವಿರಲಿದೆ. ಒಲಿಂಪಿಕ್ಸ್ ಪದಕ ವಿಜೇತರಾದ ಸಾಕ್ಷಿ ಮಲಿಕ್, ವಿಜೇಂದರ್ ಸಿಂಗ್, ಮಾಜಿ ಟೆನಿಸ್ ತಾರೆ ಸಾನಿಯಾ ಮಿರ್ಜಾ, ಸೋಮ್ದೇವವರ್ಮನ್, ಪಿ. ಕಶ್ಯಪ್, ಅತನು ದಾಸ್, ಸೌರವ್ ಘೋಷಾಲ್, ಹೀನಾ ಸಿಧು ಮುಂತಾದ ಕ್ರೀಡಾತಾರೆಯರು ವೀಕ್ಷಕ ವಿವರಣೆ ಮತ್ತು ವಿಶ್ಲೇಷಣೆಯನ್ನು ನೀಡಲಿದ್ದಾರೆ.