

ನವದೆಹಲಿ: ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್ಗೆ ಭಾರತದ ಪುರುಷರ ಮತ್ತು ಮಹಿಳಾ ಟೇಬಲ್ ಟೆನಿಸ್ ತಂಡವನ್ನು ಪ್ರಕಟಿಸಲಾಗಿದ್ದು, ಅನುಭವಿಗಳಾದ ಶರತ್ ಕಮಲ್ ಮತ್ತು ಮನಿಕಾ ಬಾತ್ರ ಸಾರಥ್ಯ ವಹಿಸಿಕೊಳ್ಳಲಿದ್ದಾರೆ. ಕರ್ನಾಟಕದ ಯುವ ಆಟಗಾರ್ತಿ ಅರ್ಚನಾ ಕಾಮತ್ ಮಹಿಳಾ ತಂಡದಲ್ಲಿ ಸ್ಥಾನ ಸಂಪಾದಿಸಿದ್ದು, ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಲಿದ್ದಾರೆ.
ಹಾಲಿ ವಿಶ್ವ ರ್ಯಾಂಕಿಂಗ್ ಆಧಾರದಲ್ಲಿ ತಂಡವನ್ನು ಆರಿಸಲಾಗಿದ್ದು, ವಿಶ್ವ ನಂ. 103 ಆಟಗಾರ್ತಿ ಅರ್ಚನಾ, ಮನಿಕಾ ಮತ್ತು ಶ್ರೀಜಾ ಅಕುಲಾ ಜತೆ ಸ್ಥಾನ ಪಡೆದಿದ್ದಾರೆ. ಐಹಿಕಾ ಮುಖರ್ಜಿ (133) ಸ್ಥಾನ ವಂಚಿತರಾಗಿದ್ದಾರೆ. ಪುರುಷರ ವಿಭಾಗದಲ್ಲಿ ಶರತ್ ಜತೆಗೆ ಹಮೀರ್ತ್ ದೇಸಾಯಿ ಮತ್ತು ಮಾನವ್ ಠಕ್ಕರ್ ಸ್ಥಾನ ಪಡೆದಿದ್ದಾರೆ.