

ಬೆಂಗಳೂರು: ನಾಯಕ ಮಯಾಂಕ್ ಅಗರ್ವಾಲ್ (105 ರನ್, 57 ಎಸೆತ, 9 ಬೌಂಡರಿ, 6 ಸಿಕ್ಸರ್) ಶತಕದ ಬಲದಿಂದ ಬೆಂಗಳೂರು ಬ್ಲಾಸ್ಟರ್ಸ್ ತಂಡ 2ನೇ ಆವೃತ್ತಿಯ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 ಟೂರ್ನಿಯ 9ನೇ ಪಂದ್ಯದಲ್ಲಿ ಕೊನೆಗೂ ಗೆಲುವಿನ ಖಾತೆ ತೆರೆಯುವಲ್ಲಿ ಸಲವಾಗಿದೆ. ಸತತ 8 ಸೋಲುಗಳಿಂದ ತತ್ತರಿಸಿದ್ದ ಬೆಂಗಳೂರು ತಂಡ ಶುಕ್ರವಾರ ನಡೆದ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ವಿರುದ್ಧ 10 ರನ್ಗಳಿಂದ ಟೂರ್ನಿಯ ಮೊದಲ ಗೆಲುವು ದಾಖಲಿಸಿತು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ಗೆ ಇಳಿದ ಬೆಂಗಳೂರು 4 ವಿಕೆಟ್ಗೆ 212 ರನ್ ಪೇರಿಸಿತು. ಪ್ರತಿಯಾಗಿ ಮೈಸೂರು ತಂಡ 8 ವಿಕೆಟ್ಗೆ 202 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಬೆಂಗಳೂರು ಬ್ಲಾಸ್ಟರ್ಸ್: 4 ವಿಕೆಟ್ಗೆ 212 (ಮಯಾಂಕ್ 105, ನಿಶ್ಚಲ್ 29, ಶುಭಾಂಗ್ 24, ಸೂರಜ್ 35*, ಸುಚಿತ್ 34ಕ್ಕೆ 2). ಮೈಸೂರು ವಾರಿಯರ್ಸ್: 8 ವಿಕೆಟ್ಗೆ 202 (ಕಾರ್ತಿಕ್ 70, ಸಮರ್ಥ್ 35, ಕರುಣ್ 32, ಸುಚಿತ್ 19, ಮೊಹ್ಸಿನ್ 35ಕ್ಕೆ 4, ಸ್ರಾರ್ಜ್ 23ಕ್ಕೆ 2). ಪಂದ್ಯಶ್ರೇಷ್ಠ: ಮಯಾಂಕ್ ಅಗರ್ವಾಲ್.