ಚಂದ್ರಯಾನ-3 ಯಶಸ್ಸಿನ ಬಗ್ಗೆ ಆಸೀಸ್​ ಕ್ರಿಕೆಟಿಗ ವಾರ್ನರ್​ ಪೋಸ್ಟ್​ಗೆ ಫ್ಯಾನ್ಸ್​ ಫಿದಾ!

warner web
Published on

ನವದೆಹಲಿ: ಭಾರತದ ಮಹಾತ್ವಾಕಾಂಕ್ಷೆಯ ಚಂದ್ರಯಾನ-3 ಯೋಜನೆಯ ಲ್ಯಾಂಡರ್​ ಚಂದ್ರನ ದಣ ಧ್ರುವದಲ್ಲಿ ನಿರೀಕ್ಷೆಯಂತೆಯೇ ಬುಧವಾರ ಸಂಜೆ ಯಶಸ್ವಿಯಾಗಿ, ಸುರತವಾಗಿ ಇಳಿಯುತ್ತಿದ್ದಂತೆ ಭಾರತೀಯರು ಸಂಭ್ರಮಿಸಿದರು. ಅತ್ತ ಆಸ್ಟ್ರೆಲಿಯಾದಲ್ಲಿ, ಭಾರತದ ಈ ಐತಿಹಾಸಿಕ ಸಾಧನೆಗೆ ಕ್ರಿಕೆಟಿಗ ಡೇವಿಡ್​ ವಾರ್ನರ್​ ಕೂಡ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಭಾರತದ ಕ್ರಿಕೆಟ್​ ಪ್ರೇಮಿಗಳ ಮನಗೆದ್ದಿದ್ದಾರೆ.

ಭಾರತದ ಲ್ಯಾಂಡರ್​ ತ್ರಿವರ್ಣ ಧ್ವಜದೊಂದಿಗೆ ಚಂದ್ರನ ಮೇಲೆ ಇಳಿದಂತಿರುವ ಸಾಂಕೇತಿಕ ಚಿತ್ರವನ್ನು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿರುವ ವಾರ್ನರ್​, 'ಇದು ನಿಜಕ್ಕೂ ಭಾರಿ ವಿಶೇಷವಾದುದು. ವೆಲ್​ ಡನ್​ ಇಂಡಿಯಾ' ಎಂದು ಬರೆದುಕೊಂಡಿದ್ದಾರೆ.

ಇದರ ಬೆನ್ನಲ್ಲೇ, ವಾರ್ನರ್​ ಭಾರತದ ಬಗ್ಗೆ ವ್ಯಕ್ತಪಡಿಸಿರುವ ಅಭಿಮಾನಕ್ಕೆ ಭಾರತದಲ್ಲಿನ ಅವರ ಅಭಿಮಾನಿಗಳು ಪುಳಕಿತರಾಗಿದ್ದಾರೆ. ಜತೆಗೆ ವಾರ್ನರ್​ಗೆ ಧನ್ಯವಾದಗಳನ್ನೂ ತಿಳಿಸಿದ್ದಾರೆ. ಐಪಿಎಲ್​ನಲ್ಲಿ ಈ ಹಿಂದೆ ಸನ್​ರೈಸರ್ಸ್​ ಮತ್ತು ಈಗ ಡೆಲ್ಲಿ ಕ್ಯಾಪಿಟಲ್ಸ್​ ಪರ ಆಡುತ್ತಿರುವ ವಾರ್ನರ್​ ಸಾಮಾಜಿಕ ಜಾಲತಾಣದಲ್ಲಿ ಭಾರತದ ಬಗ್ಗೆ ಅಭಿಮಾನದ ಪೋಸ್ಟ್​ಗಳನ್ನು ಹಾಕುತ್ತಿರುವುದು ಇದೇ ಮೊದಲಲ್ಲ. ಹಿಂದೆಯೂ ಅವರ ಹಲವು ಪೋಸ್ಟ್​ಗಳು ಭಾರತೀಯರ ಹೃದಯ ಗೆದ್ದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net