ಕಬಡ್ಡಿ ತಾರೆ ದೀಪಕ್​ ಹೂಡಾ ಸಲಿಂಗಕಾಮಿ; ಬಾಕ್ಸರ್​ ಪತ್ನಿ ಸವೀಟಿ ಹೊಸ ಬಾಂಬ್​!

web devorce
Published on

ಹಿಸಾರ್​: ಈಗಾಗಲೆ ನಡೆಯುತ್ತಿರುವ ವಿಚ್ಛೇದನ ಹೋರಾಟ ನಡುವೆ ವಿಶ್ವ ಚಾಂಪಿಯನ್​ಷಿಪ್​ ಪದಕ ವಿಜೇತೆ ಬಾಕ್ಸರ್​ ಸವೀಟಿ ಬೋರಾ, ಪತಿ ಹಾಗೂ ಭಾರತ ಕಬಡ್ಡಿ ತಂಡದ ಮಾಜಿ ನಾಯಕ ದೀಪಕ್​ ಸಲಿಂಗಕಾಮಿಯಾಗಿದ್ದಾರೆ ಎಂದು ಹೊಸ ಆರೋಪ ಮಾಡಿದ್ದಾರೆ.

ಪತಿ ಮೇಲೆ ಪೊಲೀಸ್​ ಠಾಣೆಯಲ್ಲೇ ಹಲ್ಲೆ ಮಾಡಿದ ವಿಡಿಯೋ ವೈರಲ್​ ಆದ ಬೆನ್ನಲ್ಲೇ ಸವೀಟಿ, "ದೀಪಕ್​ಗೆ ಹುಡುಗರ ಮೇಲೆ ಆಸಕ್ತಿ ಇದೆ. ಆತನನ್ನು ನಾನು ಹುಡುಗರ ಅಶ್ಲೀಲ ವಿಡಿಯೋ ನೋಡುವುದನ್ನು ಮತ್ತು ಅವರ ಜತೆ ಅಶ್ಲೀಲವಾಗಿರುವುದನ್ನು ನೋಡಿದ್ದೇನೆ. ನಾನು ಇದೆಲ್ಲವನ್ನೂ ಹೇಳಲು ಬಯಸಿರಲಿಲ್ಲ. ಸರಳವಾಗಿ ವಿಚ್ಛೇದನ ಪಡೆಯಲು ಬಯಸಿದ್ದೆ. ಆದರೆ ಅಸಹಾಯಕಳಾಗಿ ಈಗ ಇದೆಲ್ಲವನ್ನೂ ಹೇಳಬೇಕಿದೆ' ಎಂದು ಅಳಲು ತೋಡಿಕೊಂಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ದೀಪಕ್​ ಹೂಡಾ ತನಗೆ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ನೀಡಿದ್ದಾರೆ. ಈ ಸಂಬಂಧ ಬಲವಾದ ಸಾಕ್ಷ$್ಯ ತನ್ನ ಬಳಿ ಇದೆ. ಅಲ್ಲದೆ ತಾನೇನಾದರು ಅಸ್ವಾಭಾವಿಕವಾಗಿ ಸಾವು ಕಂಡರೆ ಅದಕ್ಕೆ ತನ್ನ ಪತಿಯೇ ಕಾರಣರಾಗಿರುತ್ತಾರೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net