ಏಷ್ಯನ್​ ಒಳಾಂಗಣ ಅಥ್ಲೆಟಿಕ್ಸ್​ ಚಾಂಪಿಯನ್​ಷಿಪ್​: ಜ್ಯೋತಿ ರಾಷ್ಟ್ರೀಯ ದಾಖಲೆ, ಹರ್ಮಿಲನ್​ಗೆ ಚಿನ್ನ

jyothi har web
Published on

ಟೆಹ್ರಾನ್​: ಭಾರತದ ಉದಯೋನ್ಮುಖ ಅಥ್ಲೀಟ್​ಗಳಾದ ಜ್ಯೋತಿ ಯರಾಜಿ ಮತ್ತು ಹರ್ಮಿಲನ್​ ಬೈನ್ಸ್​ ಏಷ್ಯನ್​ ಒಳಾಂಗಣ ಅಥ್ಲೆಟಿಕ್ಸ್​ ಚಾಂಪಿಯನ್​ಷಿಪ್​ನಲ್ಲಿ ಸ್ವರ್ಣ ಪದಕ ಗೆದ್ದುಕೊಂಡಿದ್ದಾರೆ.

ಏಷ್ಯಾಡ್​ ರಜತ ವಿಜೇತೆ ಜ್ಯೋತಿ ಶನಿವಾರ ನಡೆದ ಮಹಿಳೆಯರ 60 ಮೀ. ಹರ್ಡಲ್ಸ್​ನಲ್ಲಿ 8.12 ಸೆಕೆಂಡ್​ಗಳಲ್ಲಿ ಸ್ಪರ್ಧೆ ಮುಗಿಸುವ ಮೂಲಕ ತನ್ನದೇ ಹೆಸರಿನಲ್ಲಿದ್ದ ರಾಷ್ಟ್ರೀಯ ದಾಖಲೆ ಸುಧಾರಿಸಿಕೊಂಡರು.

ಕಳೆದ ವರ್ಷ ಅವರು 8.13 ಸೆಕೆಂಡ್​ನಲ್ಲಿ ಓಡಿದ್ದು ಹಿಂದಿನ ದಾಖಲೆಯಾಗಿತ್ತು. ಮತ್ತೋರ್ವ ಏಷ್ಯಾಡ್​ ರಜತ ವಿಜೇತೆ ಹರ್ಮಿಲನ್​ ಮಹಿಳೆಯರ 1,500 ಮೀ. ಓಟದಲ್ಲಿ 4 ನಿಮಿಷ, 29.55 ಸೆಕೆಂಡ್​ಗಳಲ್ಲಿ ಸ್ಪರ್ಧೆ ಮುಗಿಸಿ ಚಿನ್ನಕ್ಕೆ ಮುತ್ತಿಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net