ಆರ್ಚರಿ ವಿಶ್ವಕಪ್​ನಲ್ಲಿ ಭಾರತಕ್ಕೆ 4 ಚಿನ್ನದ ಪದಕ; ಜ್ಯೋತಿ ಸುರೇಖಾ ತ್ರಿವಳಿ ಸ್ವರ್ಣ ಸಾಧನೆ

web archer
Published on

ಶಾಂಘೈ: ಭಾರತದ ಬಿಲ್ಗಾರರು ಆರ್ಚರಿ ವಿಶ್ವಕಪ್​ ಸ್ಟೇಜ್​-1ರಲ್ಲಿ 4 ಚಿನ್ನ ಸಹಿತ 5 ಪದಕ ಗೆದ್ದುಕೊಂಡಿದ್ದಾರೆ. ಏಷ್ಯನ್​ ಗೇಮ್ಸ್​ ಚಾಂಪಿಯನ್​ ಜ್ಯೋತಿ ಸುರೇಖಾ ಕಂಪೌಂಡ್​ ವಿಭಾಗದಲ್ಲಿ ಭಾರತ ಗೆದ್ದ 3 ಸ್ವರ್ಣ ಪದಕಗಳಲ್ಲಿ ವಿಶೇಷ ಕೊಡುಗೆ ನೀಡಿ ಗಮನಸೆಳೆದರು.

ವಿಶ್ವ ನಂ. 3 ಜ್ಯೋತಿ ಸುರೇಖಾ ವೈಯಕ್ತಿಕ ವಿಭಾಗದ ಜತೆಗೆ ಮಹಿಳಾ ತಂಡ ವಿಭಾಗದಲ್ಲಿ ಅದಿತಿ ಸ್ವಾಮಿ ಮತ್ತು ಪರ್​ನೀತ್​ ಕೌರ್​ ಜತೆಗೆ ಚಿನ್ನ ಗೆದ್ದರು. ಮಿಶ್ರ ವಿಭಾಗದಲ್ಲಿ ಅಭಿಷೇಕ್​ ಶರ್ಮ ಜತೆಗೂಡಿ ಚಿನ್ನದ ಪದಕ ಜಯಿಸಿದರು.

ಪುರುಷರ ತಂಡ ವಿಭಾಗದಲ್ಲಿ ಅಭಿಷೇಕ್​ ಶರ್ಮ, ಪ್ರಿಯಾಂಶು, ಪ್ರಥಮೇಶ್​ ಒಳಗೊಂಡ ತಂಡ ಚಿನ್ನದ ಪದಕ ಜಯಿಸಿತು. ಪುರುಷರ ವೈಯಕ್ತಿಕ ವಿಭಾಗದಲ್ಲಿ ಪ್ರಿಯಾಂಶು ರಜತ ಪದಕ ಗೆದ್ದರು. ರಿಕರ್ವ್​ ವಿಭಾಗದ ಪದಕ ಸ್ಪರ್ಧೆಗಳು ಭಾನುವಾರ ನಡೆಯಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net