ದಿಗ್ಗಜರ ಜೆರ್ಸಿ ನಿವೃತ್ತಿ! ಕ್ರೀಡೆಯಲ್ಲಿ ಇದು ಹೊಸದಲ್ಲ...

jersy retire web
Published on

ನವದೆಹಲಿ: ಟೀಮ್​ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅವರ 7 ನಂಬರ್​ ಜೆರ್ಸಿಯನ್ನು ಬಿಸಿಸಿಐ ನಿವೃತ್ತಿಗೊಳಿಸಿದೆ. ಈ ಹಿಂದೆ ದಿಗ್ಗಜ ಸಚಿನ್​ ತೆಂಡುಲ್ಕರ್​ ಅವರ 10 ನಂಬರ್​ ಜೆರ್ಸಿಯನ್ನೂ ನಿವೃತ್ತಿಗೊಳಿಸಲಾಗಿತ್ತು. ಆದರೆ, ಕ್ರೀಡೆಯಲ್ಲಿ ಅಥವಾ ಕ್ರಿಕೆಟ್​ನಲ್ಲಿ ಆಟಗಾರರ ಜೆರ್ಸಿ ಸಂಖ್ಯೆಯನ್ನು ನಿವೃತ್ತಿಗೊಳಿಸುವುದು ಹೊಸದೇನಲ್ಲ!

ಬಾಸ್ಕೆಟ್​ಬಾಲ್​, ಐಸ್​ ಹಾಕಿ, ರಗ್ಬಿ, ಅಮೆರಿಕನ್​ ಫುಟ್​ಬಾಲ್​, ಆಸ್ಟ್ರೆಲಿಯನ್​ ಫುಟ್​ಬಾಲ್​, ಮೋಟಾರ್​ಸ್ಪೋರ್ಟ್ಸ್​ಗಳಲ್ಲಿ ದಿಗ್ಗಜ ಕ್ರೀಡಾಪಟುಗಳ ಜೆರ್ಸಿಯನ್ನು ನಿವೃತ್ತಿಗೊಳಿಸಿ ಅವರಿಗೆ ವಿಶೇಷ ಗೌರವವನ್ನು ಸಲ್ಲಿಸುವ ಪರಿಪಾಠಗಳಿವೆ.

ಬಾಸ್ಕೆಟ್​ಬಾಲ್​ ದಿಗ್ಗಜ ಮೈಕೆಲ್​ ಜೊರ್ಡನ್​ ಅವರ 23 ನಂಬರ್​ ಜೆರ್ಸಿಯನ್ನು ಅಮೆರಿಕದ ಚಿಕಾಗೋ ಬುಲ್ಸ್​ ನಿವೃತ್ತಿಗೊಳಿಸಿದೆ. ಐಸ್​ ಹಾಕಿಯಲ್ಲಿ ಏಸ್​ ಬೈಲಿ ಅವರ 6 ನಂಬರ್​ ಜೆರ್ಸಿಯನ್ನು ಟೊರಾಂಟೊ ತಂಡ 1934ರಲ್ಲೇ ನಿವೃತ್ತಿಗೊಳಿಸಲಾಗಿತ್ತು. ಕ್ರಿಕೆಟ್​ನಲ್ಲಿ ಆಸ್ಟ್ರೆಲಿಯಾ ತಂಡ ಬೌನ್ಸರ್​ ಏಟಿಗೆ ಸಾವು ಕಂಡ ಫಿಲ್​ ಹ್ಯೂಸ್​ ಅವರ 64 ನಂಬರ್​ ಜೆರ್ಸಿಯನ್ನು ನಿವೃತ್ತಿಗೊಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net