ದುಲೀಪ್​ ಟ್ರೋಫಿಯಲ್ಲಿ ವಿರಾಟ್​ ಮತ್ತು ರೋಹಿತ್​ ಏಕೆ ಆಡಲ್ಲ? ಕಡೆಗೂ ಸ್ಪಷ್ಟನೆ ಕೊಟ್ಟ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ

ವಿಜಯವಾಣಿ - 2024-08-16T073630.332
Published on

ನವದೆಹಲಿ: ಅತಿಥೇಯ ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ಕ್ಲೀನ್​ ಸ್ವೀಪ್ ಮೂಲಕ ಗೆದ್ದ ಸೂರ್ಯಕುಮಾರ್ ಯಾದವ್ ನಾಯಕತ್ವದ ಟೀಮ್ ಇಂಡಿಯಾ, ನಂತರದಲ್ಲಿ ನಡೆದ ಏಕದಿನ ಸರಣಿಯಲ್ಲಿ 2-0 ಅಂತರದಿಂದ ಲಂಕಾ ಪಡೆ ಎದುರು ಹೀನಾಯ ಸೋಲುಂಡಿತು. ಅದು ರೋಹಿತ್ ಶರ್ಮ ಕ್ಯಾಪ್ಟನ್ಸಿಯಲ್ಲಿ ಸೋತಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ಭಾರೀ ಬೇಸರ ಮೂಡಿಸಿತು. ಇದೀಗ ಮುಂಬರುವ ದುಲೀಪ್​ ಟ್ರೋಫಿ ಟೂರ್ನಿಯತ್ತ ಎದುರು ನೋಡುತ್ತಿರುವ ಭಾರತ ತಂಡ, ಪ್ರತಿಷ್ಠಿತ ಟೂರ್ನಿ ಗೆಲ್ಲಲು ಭರ್ಜರಿ ತಯಾರಿ ನಡೆಸುತ್ತಿದೆ.

ಇನ್ನು ದುಲೀಪ್ ಟ್ರೋಫಿಯಲ್ಲಿ ಸ್ಟಾರ್ ಆಟಗಾರರು ತಂಡದ ಪರ ಆಡಲಿರುವ ವಿಷಯ ಕ್ರಿಕೆಟ್ ಅಭಿಮಾನಿಗಳಿಗೆ ಖುಷಿ ನೀಡಿದ್ದೇ ಆದರೂ ಕ್ರಿಕೆಟ್ ದಿಗ್ಗಜರಾದ ಕ್ಯಾಪ್ಟನ್ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಅವರ ಉಪಸ್ಥಿತಿ ಯಾಕಿಲ್ಲ? ಅವರಿಬ್ಬರು ಈ ಪ್ರತಿಷ್ಠಿತ ಟೂರ್ನಿಯಲ್ಲಿ ಏಕೆ ಭಾಗಿಯಾಗುವುದಿಲ್ಲ ಎಂಬ ಸರಣಿ ಪ್ರಶ್ನೆಗಳನ್ನು ಬಿಸಿಸಿಐ ಮುಂದಿಟ್ಟಿದ್ದರು. ಇದೆಲ್ಲವನ್ನು ಗಮನಿಸಿದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕಡೆಗೂ ಇದಕ್ಕೆ ಉತ್ತರಿಸುವ ಮುಖೇನ ಸ್ಪಷ್ಟನೆ ನೀಡಿದ್ದಾರೆ.

ವರದಿಗಳ ಪ್ರಕಾರ ಟೀಮ್ ಇಂಡಿಯಾ ಸ್ಟಾರ್ ವೇಗಿ ಜಸ್ಪ್ರಿತ್ ಬುಮ್ರಾ ತೆಗೆದುಕೊಂಡಿದ್ದ ವಿಶ್ರಾಂತಿ ಸಮಯ ಈಗ ಮತ್ತೆ ಮುಂದುವರಿದಿದ್ದು, ಸದ್ಯ ತಂಡದಲ್ಲಿ ಅವರ ಉಪಸ್ಥಿತಿ ಇರುವುದಿಲ್ಲ ಎಂಬುದು ಸ್ಪಷ್ಟವಾಗಿದೆ. "ವಿರಾಟ್​ ಮತ್ತು ರೋಹಿತ್​ರನ್ನು ದುಲೀಪ್​ ಟ್ರೋಫಿಯಿಂದ ಕೈಬಿಡಲಾಗಿದೆ. ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟೆಸ್ಟ್​ ಸರಣಿಗೆ ಅವರಿಬ್ಬರು ಭಾಗಿಯಾಗಲಿದ್ದಾರೆ. ಹೀಗಾಗಿ ಕೊಹ್ಲಿ ಮತ್ತು ಶರ್ಮ ಹೆಚ್ಚು ಫಿಟ್ ಆಗಿರಬೇಕು. ಇದೊಂದು ಕಾರಣದಿಂದ ಅವರನ್ನು ಟೂರ್ನಿಯಲ್ಲಿ ಆಡಿಸದೆ ಇರಲು ನಾವು ನಿರ್ಧರಿಸಿದ್ದೇವೆ" ಎಂದು ಜಯ್​ ಶಾ ಸ್ಪಷ್ಟಪಡಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net