ಪಶ್ಚಿಮ ಬಂಗಾಳ: ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸ್ನಾತಕೋತ್ತರ ಟ್ರೈನಿ ವೈದ್ಯೆಯ ಮೇಲೆ ನಡೆದ ಭೀಕರ ಅತ್ಯಾಚಾರ ಹಾಗೂ ಕೊಲೆ ಘಟನೆಯನ್ನು ಖಂಡಿಸಿ ಬಂಗಾಳ ಸೇರಿದಂತೆ ದೇಶವ್ಯಾಪಿ ಮಹಿಳಾ ವೈದ್ಯರು ಮತ್ತು ಇತರರು ಬೃಹತ್ ಪ್ರತಿಭಟನೆ ಕೈಗೊಂಡಿದ್ದು, ಧರಣಿಯನ್ನು ಇಂದು ಕೂಡ ಮುಂದುವರೆಸಿದ್ದಾರೆ. ಈಗಾಗಲೇ ಪ್ರಕರಣವನ್ನು ಹೈಕೋರ್ಟ್ ಸಿಬಿಐಗೆ ವಹಿಸಿದ್ದು, ತನಿಖೆ ಚುರುಕುಗೊಳಿಸುವಂತೆ ಆದೇಶಿಸಿದೆ. ಆಸ್ಪತ್ರೆ ಮುಂದೆ ಸಾವಿರೂರು ಸಂಖ್ಯೆಯಲ್ಲಿ ಜಮಾಯಿಸಿರುವ ಮಹಿಳಾ ಪ್ರತಿಭಟನಕಾರರು, ಇಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆ ಇಲ್ಲ, ನಾವು ಕೆಲಸ ಮಾಡಲ್ಲ ಎಂದು ಪಟ್ಟುಹಿಡಿದು, ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ: ನಿತ್ಯಭವಿಷ್ಯ: ಈ ರಾಶಿಯವರಿಗಿಂದು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಜಯ.
ಇನ್ನು ನಿನ್ನೆ ಸ್ವಾತಂತ್ರ್ಯ ದಿನಾಚರಣೆಯ ಮಧ್ಯರಾತ್ರಿಯಂದು ಕೂಡ ತಮ್ಮ ಹೋರಾಟ ಮುಂದುವರೆಸಿದ್ದ ಮಹಿಳಾ ವೈದ್ಯರ ಪ್ರತಿಭಟನೆಯ ವೇಳೆ ಹತ್ಯೆ ಮಾಡಲಾದ ಸರ್ಕಾರಿ ಸ್ವಾಮ್ಯದ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಆವರಣಕ್ಕೆ ನುಗ್ಗಿದ ಅಪರಿಚಿತ ದುಷ್ಕರ್ವಿುಗಳು, ಹಲವು ವೈದ್ಯಕೀಯ ಸಾಮಗ್ರಿಗಳನ್ನು ಧ್ವಂಸಗೊಳಿಸಿದ್ದಾರೆ. ವೈದ್ಯೆಯ ಮೇಲೆ ನಡೆದ ಅತ್ಯಾಚಾರ-ಕೊಲೆ ವಿರೋಧಿಸಿ ನೂರಾರು ಮಹಿಳೆಯರು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿರುವ ನಡುವೆಯೇ ಈ ಹಿಂಸಾಚಾರ ನಡೆದಿರುವುದು ಜನರಲ್ಲಿ ಭಾರೀ ಆತಂಕ ಮೂಡಿಸಿದೆ.
ದುಷ್ಕರ್ಮಿಗಳ ದಾಂಧಲೆಯ ವೇಳೆ ಆಸ್ಪತ್ರೆ ಆವರಣದಲ್ಲಿ ನಿಯೋಜಿಸಲಾದ ಪೊಲೀಸ್ ಅಧಿಕಾರಿಗಳು ತಕ್ಷಣವೇ ಸ್ಥಳದಿಂದ ಓಡಿದ್ದು, ಆಸ್ಪತ್ರೆಯ ಕೊಠಡಿಯೊಳಗೆ ನುಗ್ಗಿದರು. “ಅಧಿಕಾರಿಗಳು ನಮ್ಮ ಬಳಿ ಸುರಕ್ಷತೆಗೆ ಮನವಿ ಮಾಡಿಕೊಂಡರು. ಕರ್ತವ್ಯದಲ್ಲಿದ್ದ ಇಬ್ಬರು ಅಧಿಕಾರಿಗಳು, ದಯವಿಟ್ಟು ನಮ್ಮನ್ನು ನಿಮ್ಮ ವಾರ್ಡ್‌ನಲ್ಲಿ ಕೆಲವು ಸಮಯ ಅವಿತುಕೊಳ್ಳಲು ಸಹಾಯ ಮಾಡಿ ಎಂದು ಕೇಳಿಕೊಂಡರು” ಎಂದು ನರ್ಸ್ ಪರಿಸ್ಥಿತಿಯನ್ನು ವಿವರಿಸಿದ್ದಾರೆ.
ಇದನ್ನೂ ಓದಿ: ಕೋಲ್ಕತ್ತಾ ಟ್ರೖೆನಿ ವೈದ್ಯೆ ಹತ್ಯೆ ಪ್ರಕರಣ: ಆಸ್ಪತ್ರೆಯಲ್ಲಿ ದುಷ್ಕರ್ವಿುಗಳ ದಾಂಧಲೆ
ನರ್ಸ್ ನೀಡಿದ ಮಾಹಿತಿ ಪ್ರಕಾರ, “ಟ್ರೈನಿ ವೈದ್ಯೆಯನ್ನು ಅತ್ಯಾಚಾರವೆಸಗಿ ಹತ್ಯೆಗೈದ ಸೆಮಿನಾರ್ ಕೊಠಡಿಯನ್ನು ಧ್ವಂಸಗೊಳಿಸುವುದೇ ದುಷ್ಕರ್ಮಿಗಳ ಗುರಿಯಾಗಿತ್ತು. ಅದಕ್ಕಾಗಿಯೇ ಅವರು ಏಕಾಏಕಿ ದಾಳಿ ಮಾಡಿದ್ದಾರೆ. ಸೆಮಿನಾರ್ ರೂಮ್ ಪ್ರವೇಶಿಸಲು ಹರಸಾಹಸ ಪಟ್ಟರು. ಈ ವೇಳೆ ನಾವೆಲ್ಲಾ ಹೆದರಿ ಅಡಗಿ ಕುಳಿತ್ತಿದ್ದೆವು. ಮೂರನೇ ಮಹಡಿಗೆ ಪ್ರವೇಶಿಸಲು ಪ್ರಯತ್ನಿಸಿದ ಕಿಡಿಗೇಡಿಗಳಿಗೆ ಒಳ ಬರಲು ಸಾಧ್ಯವಾಗಲಿಲ್ಲ. ಹೀಗಾಗಿ ಎರಡನೇ ಮಹಡಿಯನ್ನು ಸಂಪೂರ್ಣವಾಗಿ ನಾಶಪಡಿಸಿದರು” ಎಂದು ನರ್ಸ್ ಹೇಳಿದ್ದಾರೆ,(ಏಜೆನ್ಸೀಸ್).
1 ಗ್ಲಾಸ್ ಜ್ಯೂಸ್… ಒಲಿಂಪಿಕ್ ಫೈನಲ್ ಹಿಂದಿನ ರಾತ್ರಿ ನಡೆದಿದ್ದೇನು? ಅಚ್ಚರಿ ಮೂಡಿಸುತ್ತೆ ಈ ವರದಿ
ಕಳೆದ 34 ದಿನದಿಂದ ಊಟ ಮಾಡಿಲ್ಲ! 1.2 ಕೋಟಿ ರೂ. ಸಾಲವಿದೆ, ಕೈಯಲ್ಲಿ ಕೆಲಸವಿಲ್ಲ: ಕಣ್ಣೀರಿಟ್ಟ ನಟ