ಬಾರ್ಬಡೋಸ್​ನಲ್ಲಿ ರೋಹಿತ್ ವಿಶ್ವಕಪ್​ ಎತ್ತಿಹಿಡಿಯಲಿದ್ದಾರೆ ಎಂದು ಫೆಬ್ರವರಿಯಲ್ಲೇ ಭವಿಷ್ಯ ನುಡಿದಿದ್ದರು ಜಯ್​ ಷಾ!

web jay shah
Published on

ನವದೆಹಲಿ: ರೋಹಿತ್​ ಶರ್ಮ ಸಾರಥ್ಯದಲ್ಲಿ ಭಾರತ ತಂಡ ಬಾರ್ಬಡೋಸ್​ನಲ್ಲಿ ಟಿ20 ವಿಶ್ವಕಪ್​ ಟ್ರೋಫಿ ಎತ್ತಿ ಹಿಡಿಯುತ್ತದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್​ ಷಾ ಕಳೆದ ಫೆಬ್ರವರಿಯಲ್ಲಿ ರಾಜ್​ಕೋಟ್​ನಲ್ಲಿ ಹೇಳಿದ್ದ ಮಾತು ನಿಜವಾಗಿದೆ.

2023ರ ಏಕದಿನ ವಿಶ್ವಕಪ್ ಫೈನಲ್​ ಸೋಲಿನ ಬಳಿಕ ನಿರಾಸೆಯಲ್ಲಿದ್ದ ಭಾರತ ತಂಡಕ್ಕೆ ಸ್ಫೂರ್ತಿ ತುಂಬುವ ಸಲುವಾಗಿ ಜಯ್​ ಷಾ, ಇಂಗ್ಲೆಂಡ್​ ವಿರುದ್ಧ 3ನೇ ಟೆಸ್ಟ್​ಗೆ ಮುನ್ನ ರಾಜ್​ಕೋಟ್​ ಸ್ಟೇಡಿಯಂಗೆ ನಿರಂಜನ್​ ಷಾ ಹೆಸರಿಡುವ ಸಮಾರಂಭದಲ್ಲಿ ಈ ಮಾತು ಹೇಳಿದ್ದರು. ಈ ಮೂಲಕ ಟಿ20 ವಿಶ್ವಕಪ್​ನಲ್ಲಿ ಹಾರ್ದಿಕ್​ ಪಾಂಡ್ಯ ಅಲ್ಲ, ರೋಹಿತ್​ ಶರ್ಮ ಅವರೇ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ ಎಂಬುದನ್ನೂ ಸ್ಪಷ್ಟಪಡಿಸಿದ್ದರು.

ಶನಿವಾರ ರೋಹಿತ್​ ಶರ್ಮ ಬಾರ್ಬಡೋಸ್​ನಲ್ಲಿ ಜಯ್​ ಷಾ ಕೈಯಿಂದಲೇ ವಿಶ್ವಕಪ್​ ಟ್ರೋಫಿಯನ್ನು ಸ್ವೀಕರಿಸಿದ್ದು ವಿಶೇಷವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net