ಏಷ್ಯಾಡ್​ನಲ್ಲಿ ಇಂದು ಚಿನ್ನ ಗೆಲ್ಲುವ ಫೇವರಿಟ್​ ನೀರಜ್​ ಚೋಪ್ರಾ ಕಣಕ್ಕೆ; ಜಾವೆಲಿನ್​ ಸ್ಪರ್ಧೆಯ ಸಮಯ ಹೀಗಿದೆ...

neeraj web
Published on

ಹಾಂಗ್​ಝೌ: ಒಲಿಂಪಿಕ್ಸ್​ ಮತ್ತು ವಿಶ್ವ ಚಾಂಪಿಯನ್​ ಜಾವೆಲಿನ್​ ಥ್ರೋ ತಾರೆ ನೀರಜ್​ ಚೋಪ್ರಾ ಏಷ್ಯಾಡ್​ ಅಂಗಳದಲ್ಲಿ ಬುಧವಾರ ಸ್ಪರ್ಧೆಗೆ ಇಳಿಯಲಿದ್ದಾರೆ. ಸಂಜೆ 4.35ರಿಂದ ನಡೆಯಲಿರುವ ಜಾವೆಲಿನ್​ ಥ್ರೋ ಸ್ಪರ್ಧೆಯಲ್ಲಿ ನೀರಜ್​, 2018ರ ಆವೃತ್ತಿಯಲ್ಲಿ ಗೆದ್ದಿರುವ ಸ್ವರ್ಣ ಪದಕವನ್ನು ಉಳಿಸಿಕೊಳ್ಳುವ ನಿರೀಕ್ಷೆ ಇದೆ.

ನೀರಜ್​ಗೆ ಪ್ರಮುಖ ಪ್ರತಿಸ್ಪರ್ಧಿ ಎನಿಸಿದ್ದ ಪಾಕಿಸ್ತಾನದ ಅರ್ಷದ್​ ನದೀಂ ಮೊಣಕಾಲು ಗಾಯದಿಂದಾಗಿ ಕೊನೇಕ್ಷಣದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಇದರಿಂದ ನೀರಜ್​ ಸ್ವರ್ಣ ಗೆಲುವಿನ ಹಾದಿ ಸುಗಮಗೊಂಡಿದೆ. ಭಾರತದ ಮತ್ತೋರ್ವ ಸ್ಪರ್ಧಿ ಕಿಶೋರ್​ ಜೆನಾ ಬೆಳ್ಳಿ ಮೇಲೆ ಕಣ್ಣಿಟ್ಟಿದ್ದಾರೆ. ಅರ್ಷದ್​ ನದೀಂ 2018ರ ಏಷ್ಯಾಡ್​ನಲ್ಲಿ ಬೆಳ್ಳಿ ಗೆದ್ದುಕೊಂಡಿದ್ದರು.

ಸ್ಪರ್ಧೆ ಆರಂಭ: ಸಂಜೆ 4.35

ನೇರಪ್ರಸಾರ: ಸೋನಿ ಸ್ಪೋರ್ಟ್ಸ್​​ ನೆಟ್​ವರ್ಕ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net